ಧಾರವಾಡ: ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೇಟಿಯಾಗಿದ್ದರ ಕುರಿತು ಆರ್‌ಎಸ್‌ಎಸ್ ಮುಖ್ಯಸ್ಥ ದತ್ತಾತ್ರೇಯ ಹೊಸಬಾಳೆ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಒಂದು ದೇಶದ ವ್ಯವಸ್ಥೆಯಲ್ಲಿ ಮುಖ್ಯಸ್ಥರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ? ಅದೂ ಅಲ್ಲದೇ ನಮ್ಮ ದೇಶದ ಪ್ರಧಾನಿ ಇನ್ನೊಂದು ದೇಶದ ಮುಖ್ಯಸ್ಥರನ್ನು ಭೇಟಿಯಾದರೆ ಅದು ನಮ್ಮ ದೇಶದ ಘನತೆಯನ್ನು ಎತ್ತಿ ತೋರಿಸುತ್ತದೆ.
ಒಂದು ದೇಶದ ಗಣ್ಯರು ಮತ್ತೊಂದು ದೇಶಕ್ಕೆ ಹೋದಾಗ ಅಲ್ಲಿನ ಗಣ್ಯರನ್ನು ಭೇಟಿ ಮಾಡುವುದು ಸರ್ಕಾರಗಳ ನಿಯಮ. ವಸುದೈವ ಕುಟುಂಬಕಂ ಎನ್ನುತ್ತೇವೆ ನಾವೂ ಕೂಡ ಎಲ್ಲರನ್ನು ಭೇಟಿಯಾಗುತ್ತೇವೆ. ಈ ದೇಶದ ಪ್ರಧಾನಿ ಜಗತ್ತಿನ ಮುಖ್ಯ ವ್ಯಕ್ತಿಗಳನ್ನು ಭೇಟಿ ಮಾಡಿದಾಗ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ ಎಂದಿದ್ದಾರೆ.
PublicNext
30/10/2021 02:54 pm