ಮಂಗಳೂರು: ಬಿಟ್ ಕಾಯಿನ್ ದಂಧೆಯಲ್ಲಿ ರಾಜ್ಯದ ರಾಜಕಾರಣಿಗಳ ಶಾಮೀಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು,ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಈಗಾಗಲೇ ಹೇಳಿದ್ದಾರೆ. ಯಾವುದೇ ಹಂತದ ತನಿಖೆಗೆ ತಯಾರಾಗಿರೋದಾಗಿ ಹೇಳಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳಿಗೆ ರೆಫರ್ ಮಾಡಿದ್ದಾಗಿ ಹೇಳಿದ್ದಾರೆ, ಇದರಲ್ಲಿ ಸ್ಪಷ್ಟತೆ ಇದೆ. ಹೀಗಾಗಿ ಯಾವುದೇ ಅನುಮಾನಕ್ಕೆ ಆಸ್ಪದ ಕೊಡದೇ ಪಾರದರ್ಶಕ ತನಿಖೆ ಆಗಬೇಕು. ಈ ವಿಚಾರದಲ್ಲಿ ನಮ್ಮ ಸರ್ಕಾರ ಸ್ಪಷ್ಟವಾದ ನಿಲುವು ತೆಗೆದುಕೊಂಡಿದೆ.ವ್ನಮ್ಮ ಸರ್ಕಾರಕ್ಕೆ ಇದರಿಂದ ಯಾವುದೇ ಅಪಾಯವಿಲ್ಲ. ಇದರ ತನಿಖೆ ಹಸ್ತಾಂತರ ಮಾಡಿರೋದೇ ಬೊಮ್ಮಾಯಿಯವರು.ವ್ಹೀಗಾಗಿ ನಮಗೇನೂ ಅಪಾಯವಿಲ್ಲ. ನಾವು ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡ್ತೀವಿ.ಚ್ಬಿಜೆಪಿ ನಾಯಕರು ಇದರಲ್ಲಿ ಇದಾರೆ ಅಂತ ಪ್ರತಿಪಕ್ಷ ಹೇಳ್ತಿದೆ ಅಷ್ಟೇ. ಅವರಿಗೆ ನಮ್ಮ ಪಕ್ಷದ ಮೇಲೆ ಬೆರಳು ತೋರಿಸೋ ಕೆಲಸ ಸತ್ಯ ಗೊತ್ತಿಲ್ಲದೆ ಅವರು ಗೊಂದಲ ನಿರ್ಮಾಣ ಮಾಡೋ ಕೆಲಸ ಮಾಡ್ತಿದ್ದಾರೆ ಎಂದರು.
PublicNext
29/10/2021 01:32 pm