ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಿಜೆಪಿ ದುಡ್ಡು ಖರ್ಚು ಮಾಡಿ ಚುನಾವಣೆ ಗೆಲ್ಲಲು ಹೊರಟಿದೆ; ಸಿದ್ದರಾಮಯ್ಯ

ಹುಬ್ಬಳ್ಳಿ: ಬಿಜೆಪಿ ಸುಳ್ಳು ಹೇಳಿ ಪ್ರಚಾರ ಮಾಡುತ್ತಿದೆ, ದುಡ್ಡು ಖರ್ಚು ಮಾಡಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರವಾಗಿ ಆರೋಪಿಸಿದ್ದಾರೆ.

ನಗರದಲ್ಲಿಂದು ಹಾನಗಲ್ ಉಪಚುನಾವಣೆ ಪ್ರಚಾರಕ್ಕೆ ತೆರಳುವ ಮುನ್ನ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭಿವೃದ್ಧಿ ಮೇಲೆ ಮತ ನೀಡಿ ಅಂತಿದ್ದಾರೆ. ಅವರು ಮಾಡಿದ ಅಭಿವೃದ್ಧಿಯ ಪಟ್ಟಿ ಮಾಡಿ ಹೇಳಲಿ, ನಾನು ಸಿಎಂ ಆದ ಮೇಲೆ ಹಾವೇರಿಗೆ ಏನೂ ಕೊಟ್ಟಿದ್ದೇನೆ ಅಂತಾ ಮನೋಹರ್ ತಹಶೀಲ್ದಾರರನ್ನು ಕೇಳಿ , 2400 ಕೋಟಿ ಅಭಿವೃದ್ಧಿಗೆ ಕೊಟ್ಟಿದ್ದೇನೆ.

ಕಾಂಗ್ರೆಸ್ ಜಾತಿ ಧರ್ಮಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂಬ ಸಿಎಂ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಮಗೆ ಅದು ಗೊತ್ತಿಲ್ಲ, ಅವರ ಬಳಿ ಮುಸ್ಲಿಂ ಮಂತ್ರಿ ಇದ್ದಾರಾ? ಮುಸ್ಲಿಂರನ್ನು ಯಾಕೆ ಸಚಿವರನ್ನಾಗಿ ಮಾಡಲಿಲ್ಲ‌? ಸಂವಿಧಾನ ಬದಲಾವಣೆ ಮಾಡುತ್ತೇವೆ ಅಂದವರು ಯಾರು? ನಾವು ಅಧಿಕಾರಕ್ಕೆ ಬಂದಿರೋದೆ ಸಂವಿಧಾನ ಬದಲಾವಣೆ ಮಾಡೋಕ್ಕೆ ಅಂದವರು ಅವರೇ ಅಲ್ವಾ, ಅದು ಅಧಿಕೃತ ಆಯ್ತು, ಮುರಗೇಶ ನಿರಾಣಿ, ಬಸವರಾಜ ಬೊಮ್ಮಾಯಿ ಅವರಿಗೆ ಹಾನಗಲ್ ನಲ್ಲಿ ಬಿಜೆಪಿ ಸೋಲುತ್ತೆ ಎಂದು ಗೊತ್ತಿದೆ. ಬಿ.ಎಸ್.ವೈ ಇದ್ದಾಗ ಇದ್ದ ಅಲೆ ಬೊಮ್ಮಾಯಿ ಬಂದಮೇಲೆ ಇಲ್ವಾ ಎಂದು ಟೀಕಿಸಿದರು.

ಕೋವಿಡ್ ಲಸಿಕೆ ಅಭಿಯಾನ ನೂರು ಕೋಟಿ ಮುಟ್ಟಿದೆ ಎಂದು ಸಂಭ್ರಮ ಮಾಡುತ್ತಾ ಇರುವ ಬಿಜೆಪಿಯವರು. 49 ಕೋಟಿ ಮಾತ್ರ ಮೊದಲ ಡೋಸ್, 29 ಕೋಟಿ ಎರಡನೇ ಡೋಸ್ ಲಸಿಕೆ ನೀಡಿದ್ದಾರೆ . 59 ಕೋಟಿ ಲಕ್ಷ ಜನ ಸತ್ತಿದ್ದಾರೆ. ಆಕ್ಸಿಜನ್ ಬೆಡ್, ಔಷಧಿ ಕೊಡದೇ ಇರುವುದಕ್ಕೆ 50 ಲಕ್ಷ ಜನರು ಸತ್ತಿದ್ದಾರೆ ಎಂದು ಸರಕಾರವನ್ನು ಮಾತಿನಿಂದ ತಿವಿದಿದ್ದಾರೆ.

Edited By : Manjunath H D
PublicNext

PublicNext

22/10/2021 11:09 am

Cinque Terre

147.79 K

Cinque Terre

31

ಸಂಬಂಧಿತ ಸುದ್ದಿ