ವಿಜಯಪುರ: ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಯಾವುದೂ ಸರಿ ಇಲ್ಲ. ಕಾಂಗ್ರೆಸ್ ವಕ್ತಾರ ವಿ.ಎಸ್ ಉಗ್ರಪ್ಪ ಹಾಗೂ ಸಲೀಂ ನಡುವಿನ ಗುಸುಗುಸು ಮಾತುಗಳೇ ಇದಕ್ಕೆ ಸಾಕ್ಷಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಸಿಂದಗಿ ವಿಧಾನಸಭಾ ಕ್ಷೇತ್ರದ ತಾಂಬಾ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಶೆಟ್ಟರ್, ಉಗ್ರಪ್ಪ ಅವರು ಸಿದ್ದರಾಮಯ್ಯರ ಶಿಷ್ಯರಾಗಿದ್ದಾರೆ. ಡಿಕೆಶಿ ಬಗ್ಗೆ ಸಲೀಂ ಪಿಸುಮಾತು ಹೇಳುವಾಗ ಉಗ್ರಪ್ಪ ನಗುತ್ತ ಕೂತಿದ್ದರು. ಹೀಗಾಗಿ ಡಿಕೆಶಿ ಏನೆಲ್ಲ ಮಾಡುತ್ತಿದ್ದಾರೆಂಬುದು ಅವರ ಪಕ್ಷದವರಿಂದಲೇ ಗೊತ್ತಾಗಿದೆ. ಸಿದ್ದರಾಮಯ್ಯ, ಡಿಕೆಶಿ ಅವರನ್ನು ನಂಬಿ ಇನ್ಮುಂದೆ ಯಾರೂ ಮತ ಹಾಕೋದಿಲ್ಲ. ಈ ಇಬ್ಬರೂ ನಾಯಕರು ಮನೆಗೆ ಹೋಗಲಿದ್ದಾರೆ. ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಜಯಭೇರ ಬಾರಿಸಲಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಬಲಿಷ್ಠವಾಗಿದೆ. ಬಲಿಷ್ಠ ನಾಯಕರೂ ಇದ್ದಾರೆ. ಯಡಿಯೂರಪ್ಪ ಸಾಧನೆ ಕಣ್ಮುಂದೆ ಇದೆ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಪಕ್ಷವೇ ಅಧಿಕಾರದಲ್ಲಿದೆ. ಈ ರೀತಿಯ ಅವಕಾಶ ಸಿಗಲ್ಲ. ಹೀಗಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಶೆಟ್ಟರ್ ಮನವಿ ಮಾಡಿದರು.
PublicNext
21/10/2021 05:18 pm