ಬೆಂಗಳೂರು:ಟೀಕಾಕಾರರು ಗಾಂಧಿಯನ್ನ ಹಿಂದು ವಿರೋಧಿ ಅಂದ್ರು, ಮುಸ್ಲಿಂ ವಿರೋಧಿ ಅಂತಲೂ ಹೇಳಿದ್ರು, ನನ್ನ ಬಿಡ್ತಾರೆಯೆ ಅಂತಲೇ ಸಿದ್ಧರಾಮಯ್ಯ ನಿನ್ನೆ ಎಚ್ಡಿಕೆ ಕೊಟ್ಟ ಏಟಿಗೆ ಇಂದು ಟ್ವಿಟರ್ ಮೂಲಕ ಪರೋಕ್ಷವಾಗಿಯೇ ಟಾಂಗ್ ಕೊಟ್ಟಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣದ ಪೇಟೆಂಟ್ ತೆಗೆದುಕೊಂಡಂತೆ ಪೋಸು ಕೊಡುವ ಸಿದ್ಧಹಸ್ತ ಶೂರರ ನಿಜವಾದ ಬಣ್ಣ ಬಯಲು ಮಾಡೋ ಟೈಮ್ ಬಂದಿದೆ ಅಂತಲೇ ಎಚ್ಡಿಕೆ ನಿನ್ನೆ ಸಿದ್ಧರಾಮಯ್ಯನವರನ್ನ ಪರೋಕ್ಷವಾಗಿಯೇ ಟೀಕಿಸಿದ್ದರು. ಇಂದು ಸಿದ್ಧರಾಮಯ್ಯ ಅವ್ರು ಟ್ವಿಟರ್ ಮೂಲಕ ಪರೋಕ್ಷವಾಗಿಯೇ ಎಚ್ಡಿಕೆಗೆ ತಿರುಗೇಟುಕೊಟ್ಟಿದ್ದಾರೆ. ಅದು ಇಂತಿದೆ:
ಮಹಾತ್ಮ ಗಾಂಧೀಜಿ ಅವರನ್ನುಹಿಂದೂ ವಿರೋಧಿ ಎನ್ನುತ್ತಿದ್ದ ಹಿಂದೂಗಳು,ದಲಿತ ವಿರೋಧಿ ಎನ್ನುತ್ತಿದ್ದ ದಲಿತರು,
ಮುಸ್ಲಿಮ್ ವಿರೋಧಿ ಎನ್ನುತ್ತಿದ್ದ ಮುಸ್ಲಿಮರು ಇದ್ದರು. ಮಹಾತ್ಮರ ಬೆನ್ನು ಬಿಡದ ಟೀಕಾಕಾರರು ನನ್ನಂತಹ ಹುಲುಮಾನವರನ್ನು ಬಿಡುತ್ತಾರೆಯೇ?
ಸಬ್ ಕೋ ಸನ್ಮತಿ ದೇ ಭಗವಾನ್.
ಹೀಗೆ ಬರೆದು, ಟೀಕೆ ಮಾಡೋ ಪ್ರತಿಯೊಬ್ಬರಿಗೂ ಗಾಂಧೀಜಿ ಉದಾಹರಣೆಕೊಟ್ಟು ನಾನ ಹಾಗಲ್ಲ ಹೀಗೆ ಅಂತ ಹೇಳೋ ಕೆಲಸ ಮಾಡಿದ್ದಾರೆ ಸಿದ್ಧರಾಮಯ್ಯ.
PublicNext
17/10/2021 12:42 pm