ಮೈಸೂರು: ಜನವರಿಯಿಂದ ಹೆಚ್ ಡಿ ಕುಮಾರಸ್ವಾಮಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು , ಈ ಸಂದರ್ಭ ರಾಜ್ಯದ ಎಲ್ಲಾ ಹಳ್ಳಿಗಳಿಗೂ ಹೋಗಿ ಪಂಚರತ್ನ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ,ಮನೆಯಲ್ಲಿ ಒಬ್ಬರಿಗೆ ಉದ್ಯೋಗ , ಎಲ್ಲರಿಗೂ ಸೂರು, ಉಚಿತವಾಗಿ ಉತ್ತಮ ಶಿಕ್ಷಣ ,ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ,ರೈತರು ಸುಸ್ಥಿರವಾಗಿ ಜೀವನ ಕಟ್ಟಿಕೊಳ್ಳುವ ಯೋಜನೆ ಬಗ್ಗೆ ಮನವರಿಕೆ ಮಾಡುವುದಾಗಿ ತಿಳಿಸಿದರು.
ಮಾತು ಮುಂದುವರಿಸಿದ ಕುಮಾರಣ್ಣ "ಐದು ವರ್ಷದ ಬಿಜೆಪಿ ಕಾಂಗ್ರೆಸ್ ಸರ್ಕಾರವನ್ನು ನೀವು ನೋಡಿದ್ದೀರಿ. ಚುನಾವಣೆಯ ವೇಳೆ ದುಡ್ಡು ಕೊಟ್ಟು ಓಟು ಹಾಕಿಸಿಕೊಳ್ಳುತ್ತಾರೆ.ಈಗ ಪೆಟ್ರೋಲ್ ಸೇರಿದಂತೆ ಎಲ್ಲವೂ ದುಬಾರಿಯಾಗಿದೆ.ಹೀಗಾಗಿ ನನಗೂ ಅವಕಾಶ ನೀಡಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಆಶೀರ್ವಾದ ಮಾಡಿ.ನಾನು ನನ್ನ ಐದು ಯೋಜನೆ ಕೊಡಲಿಲ್ಲ ಎಂದರೆ ಯಾವತ್ತು ನನಗೆ ಮತ ನೀಡಿ ಎನ್ನಲ್ಲಾ ಎಂದರು.
ನಿನ್ನೆ ಐದು ಜನ ಸೈನಿಕರು ಉಗ್ರರದಾಳಿಗೆ ಬಲಿಯಾಗಿದ್ದಾರೆ ಇದು ಪ್ರಧಾನಿ ಮೋದಿ ಅವರು ನೀಡುತ್ತಿರುವ ಕೊಡುಗೆ.ದೇವೇಗೌಡರು ಪ್ರಧಾನಿಯಾಗಿದ್ದಾಗ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ.ದೇವೇಗೌಡರು ಹಳ್ಳಿಯಿಂದ ಬೆಳೆದು ಬಂದ ನಾಯಕ.ಇದು ದೇವೇಗೌಡರ ಕೊಡುಗೆ.ರೈತರ ಸಾಲ ಮನ್ನಾ ಮಾಡಿದ್ದೇನೆ.ಹಾನಗಲ್ ರೈತರು ಪೋನ್ ಮಾಡಿ ನನ್ನ ಕುಟುಂಬದವರಿಗೆ 10 ಲಕ್ಷ ಸಾಲ ಮನ್ನವಾಗಿದೆ,ಇದೇ ಹಣದಲ್ಲಿ ಮನೆ ಕಟ್ಟಿದ್ದೇನೆ ಗೃಹ ಪ್ರವೇಶಕ್ಕೆ ಬನ್ನಿ ಅಂತ ಪೋನ್ ಮಾಡ್ತಾರೆ.ಆದ್ರೆ ಓಟ್ ಹಾಕಬೇಕಾದರೆ ರೈತರು ನನ್ನನ್ನು ಮರೆಯುತ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಕೊಟ್ಟಿದ್ದಾರೆ.
PublicNext
12/10/2021 05:54 pm