ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಹಾನಗಲ್, ಸಿಂಧಗಿ ಬೈಎಲೆಕ್ಷನ್ ನಲ್ಲಿ ನಾವೇ ಗೆಲ್ತೀವಿ: ಸಿಎಂ ಬೊಮ್ಮಾಯಿ

ದಾವಣಗೆರೆ: ನನ್ನದು ದಾವಣಗೆರೆಯ ಭೇಟಿ ದಿಢೀರ್ ಅಂತಾ ಆಗಿಲ್ಲ. ಸಿಂಧಗಿ ಹಾಗೂ ಹಾನಗಲ್ ಉಪಚುನಾವಣೆಗೆ ಯಾವ ರೀತಿ ರಣತಂತ್ರ ರೂಪಿಸಬೇಕೆಂಬ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಗಿದ್ದು, ಈ ಎರಡೂ ಕ್ಷೇತ್ರಗಳಲ್ಲಿ ಗೆಲ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಜಿಎಂಐಟಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಎದುರಾಗುತ್ತಿರುವ ಹಾನಗಲ್ ಹಾಗೂ ಸಿಂಧಗಿ ಕ್ಷೇತ್ರದ ಉಪಚುನಾವಣೆಯ ಗೆಲುವಿಗೆ ಬಿಜೆಪಿ ರಣತಂತ್ರ ರೂಪಿಸುವ ಸಂಬಂಧ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು.

ಸಚಿವರು, ಶಾಸಕರು, ಹಾನಗಲ್ ಹಾಗೂ ಹಾವೇರಿ ಕ್ಷೇತ್ರದ ಪ್ರಮುಖರ ಜೊತೆ ಸಮಾಲೋಚನೆ ನಡೆಸಿದ್ದೇನೆ. ಸಿ. ಆರ್. ಬಳ್ಳಾರಿ ಅವರು ಸ್ಪರ್ಧೆ ಮಾಡುವ ಬಗ್ಗೆ ಅವರಿಗೆ ಬಿಟ್ಟ ವಿಚಾರ ಎಂದು ಸಿಎಂ ಬೊಮ್ಮಾಯಿ ಅವರೇ ಸ್ಪಷ್ಟಪಡಿಸಿದ್ದಾರೆ. ಭಿನ್ನಮತ ಶಮನ ಪ್ರಯತ್ನಿಸುವ ಪ್ರಯತ್ನ ಮಾಡಿದ್ದಾರೆ. ಆದರೂ ಬಳ್ಳಾರಿ ಅವರ ಸ್ಪರ್ಧೆ ಬಗ್ಗೆ ನಾನು ನಿರ್ಧರಿಸಲು ಆಗಲ್ಲ. ಅವರೇ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.

ದಾವಣಗೆರೆ ಮುಖಂಡರನ್ನು ಬೇರೆ ಬೇರೆ ವಿಚಾರಕ್ಕೆ ಭೇಟಿ ಆಗಬೇಕಿತ್ತು. ಹಾಗಾಗಿ ಬಂದಿದ್ದೇನೆ. ಎಲ್ಲಾ ಶಾಸಕರನ್ನು ಕರೆಯಿಸಿಕೊಂಡು ಚರ್ಚೆ ನಡೆಸಿದ್ದೇನೆ. ಇಲ್ಲಿ ಆಗಬೇಕಿರುವ ಅಭಿವೃದ್ಧಿ ವಿಚಾರಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಹಾನಗಲ್ ಹಾಗೂ ಸಿಂಧಗಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ ಎಂದು ಹೇಳಿದರಲ್ಲದೇ, ಸಿ. ಆರ್. ಬಳ್ಳಾರಿ ಅವರ ಜೊತೆ ನಮಗೆ ಇವತ್ತಿನ ನಂಟಲ್ಲ. ಹಲವಾರು ವರ್ಷಗಳಿಂದಲೂ ಉತ್ತಮ ಸಂಬಂಧ ಇದೆ. ಅವರು ಸರ್ವೀಸ್ ನಲ್ಲಿದ್ದಾಗಲೂ ನಮಗೂ ಹಾಗೂ ಸಿ. ಎಂ. ಉದಾಸಿ ಅವರ ಜೊತೆ ಉತ್ತಮ ಒಡನಾಟ ಹೊಂದಿದ್ದರು. ನನ್ನ ತಂದೆಯ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ಹೇಳಿದರು.

ನಾನು ದಾವಣಗೆರೆಗೆ ಬರುವುದಾಗಿ ಹೇಳಿದಾಗ ಬಂದು ಭೇಟಿಯಾಗುತ್ತೇನೆ ಎಂದು ಬಳ್ಳಾರಿ ಅವರು ಹೇಳಿದ್ದರು. ಆಯ್ತು ಬನ್ನಿ ಎಂದಿದ್ದೆ. ಚರ್ಚೆ ಮಾಡಿದ್ದೇವೆ. ಸ್ಪರ್ಧೆಯಲ್ಲಿ ಉಳಿಯುವುದು ಅಥವಾ ಬಿಡುವುದೋ ಎಂಬ ಬಗ್ಗೆ ಅವರ ಬೆಂಬಲಿಗರ ಜೊತೆ ಸಮಾಲೋಚನೆ ಮಾಡಿ ತಿಳಿಸುವುದಾಗಿ ಹೇಳಿದ್ದಾರೆ. ಹಾಗಾಗಿ, ಈ ವಿಚಾರದಲ್ಲಿ ನಾನೇನೂ ಹೇಳಲು ಬರದು. ಅವರೇ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರಲ್ಲದೇ, ಬೆಂಗಳೂರು ಜಿಲ್ಲಾ ಉಸ್ತುವಾರಿ ವಿಚಾರಕ್ಕೆ ಸಂಬಂಧಿಸಿದಂತೆ ವಿ. ಸೋಮಣ್ಣ ಹಾಗೂ ಆರ್. ಅಶೋಕ್ ನಡುವಿನ ಜಟಾಪಟಿ ಕುರಿತ ಕೇಳಿದ ಪ್ರಶ್ನೆಗೆ ಕಾದು ನೋಡಿ ಎಂದಷ್ಟೇ ಹೇಳಿ ತೆರಳಿದರು.

Edited By : Manjunath H D
PublicNext

PublicNext

12/10/2021 02:01 pm

Cinque Terre

51.52 K

Cinque Terre

1

ಸಂಬಂಧಿತ ಸುದ್ದಿ