ಕೋಲ್ಕತ್ತಾ: ನವರಾತ್ರಿ ಹಬ್ಬಕ್ಕೆ ಇಡೀ ಕೊಲ್ಕತ್ತಾ ರಂಗೇರುತ್ತದೆ. ದೇವಿ ಪೂಜೆಯನ್ನ ಇಲ್ಲಿಯಷ್ಟು ವಿಶೇಷ ಎಲ್ಲೂ ಮಾಡೋದಿಲ್ಲ.ದೇವಿ ಆರಾಧನೆ ಇಲ್ಲಿ ಅಷ್ಟಿದೆ. ಇದರಂತೆ, ದೀದಿ ಮಮತಾ ಬ್ಯಾನರ್ಜಿ ಆರಾಧನೆನೂ ಅಷ್ಟೇ ಇದೆ. ನವರಾತ್ರಿ ಹಬ್ಬಕ್ಕೆ ಒಂದ್ ಕಡೆ ದೇವಿ ಅಲಂಕಾರ ಇದ್ದರೇ, ಮತ್ತೊಂದು ಕಡೆಗೆ ಮಮತಾ ದೇವಿ ರೂಪದ ಮೂರ್ತಿನೂ ಸ್ಥಾಪನೆ ಆಗಿದೆ.
ತೃಣಮೂಲ ಕಾಂಗ್ರೆಸ್ ನ ನಾಯಕಿ ಮಮತಾ ಬ್ಯಾನರ್ಜಿ ನಿಜಕ್ಕೂ ಕೋಲ್ಕತ್ತಾ ಜನಕ್ಕೆ ದೇವಿನೆ ಸರಿ. ಮಹಿಳೆಯರ ಅಗತ್ಯಕ್ಕೆ ಸ್ಪಂದಿಸುತ್ತಾರೆ. ಹೊಸ ಹೊಸ ಯೋಜನೆಯನ್ನೂ ಜಾರಿಗೆ ತರುತ್ತಾರೆ. ಅದಕ್ಕೇನೆ ಇಲ್ಲಿಯ ಜನಕ್ಕೆ ಮಮತಾ ದೇವಿ ರೂಪದ ದೀದಿ. ನವರಾತ್ರಿ ಹಬ್ಬಕ್ಕೆಂದೆ ಇಲ್ಲಿ ದೇವಿ ಸ್ಥಾಪಿಸಲಾಗಿದೆ. ಅದೇ ದೇವಿ ಸನಿಹದಲ್ಲಿಯೆ ಮಮತಾ ಮೂರ್ತಿನೂ ಇದೆ.
ಮಮತಾ ಆರಾಧಕರು ಮಾಡಿರೋ ಆ ಮೂರ್ತಿಯಲ್ಲಿ ದೀದಿಯ ಎಲ್ಲ ಕಾರ್ಯದ ಚಿತ್ರಣ ಇದೆ. ಪಕ್ಷದ ಯೋಜನೆಗಳ ಸಂಕ್ಷಿಪ್ತ ನೋಟವೂ ದೊರೆಯುತ್ತದೆ. ಅಷ್ಟು ವಿಶೇಷವಾದ ಈ ದೇವಿ ರೂಪದ ದೀದಿಗೆ ಇಲ್ಲಿ ಅತಿ ಹೆಚ್ಚು ಫಾಲೋವರ್ಸ್ ಇದ್ದಾರೆ. ಅದಕ್ಕೆ ಅಲ್ವೇ ದೀದಿ ಇಲ್ಲಿ ದೇವಿ ಆಗಿರೋದು ?
PublicNext
08/10/2021 12:11 pm