ಲಖೀಂಪುರ: ಪಂಜಾಬ್ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಮತ್ತು ಪೊಲೀಸರ್ ನಡುವೆ ಮಾತಿನ ಚಕಮಕಿ ನಡೆದಿದೆ. ಲಖೀಂಪುರ ರೈತರ ಸಾವಿಗೆ ಸಂಬಂಧಿಸಿದಂತೆ,ರೈತರ ಫ್ಯಾಮಿಲಿಗೆ ಸಾಂತ್ವನ ಹೇಳೋಕೆ ಇಲ್ಲಿಗೆ ಬಂದಿದ್ದರು ನವಜೋತ್ ಸಿಂಗ್ ಸಿಧು. ಆದರೆ ಪೊಲೀಸ್ ಮತ್ತು ಸಿಧು ನಡುವೆ ಆಗ ತೀವ್ರ ಮಾತಿನ ಚಕಮಕಿ ನಡೆದು ಉದ್ವಿಗ್ನ ಪರಿಸ್ಥಿತಿಯೇ ನಿರ್ಮಾಣ ಆಗಿತ್ತು.
ಲಖೀಂಪುರ ರೈತರ ಸಾವಿನ ಘಟನೆ ಎಲ್ಲರಲ್ಲೂ ಕಿಡಿ ಹಚ್ಚಿದೆ.ಆಕ್ರೋಶವನ್ನೂ ಹುಟ್ಟುಹಾಕಿದೆ.ಇಡೀ ದೇಶವೇ ಈ ಘಟನೆ ಬಗ್ಗೆ ಚರ್ಚೆ ಮಾಡುತ್ತಿದೆ.ಅಷ್ಟು ಹಿಂಸಾತ್ಮಕ ಈ ಘಟನೆಯಲ್ಲಿ ಮೃತಪಟ್ಟ ರೈತರ ಕುಟುಂಬಕ್ಕೆ ಇಂದು ಸಾಂತ್ವನ ಹೇಳೋಕೆ ಹೊರಟಿದ್ದರು ನವಜೋತ್ ಸಿಂಗ್ ಸಿಧು.
ಆದರೆ,ಇಲ್ಲಿಯ ಯಮುನಾನಗರದ ಸಹರನ್ ಪುರದಲ್ಲಿಯೇ ಪೊಲೀಸರು ನವಜೋತ್ ಸಿಂಗ್ ಸಿಧುರನ್ನ ತಡೆದೆ ಬಿಟ್ಟರು. ಆಗಲೇ ಸಿಧು ಸಿಟ್ಟಿಗೆದ್ದದ್ದು. ರೈತರನ್ನ ಕೊಂದ ಬಿಜೆಪಿ ಮಂತ್ರಿ ಅಜಯ್ ಮಿಶ್ರಾ ಮತ್ತು ಆಶಿಶ್ ಮಿಶ್ರಾ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಅವರನ್ನ ತಡೆಯೋ ಕೆಲಸವನ್ನೂ ಮಾಡಲಿಲ್ಲ. ಈಗ ನನ್ನ ಹೇಗೆ ತಡೆಯುತ್ತೀರಾ ಅಂತ ಸಿಧು ಪೊಲೀಸರನ್ನ ತೀವ್ರವಾಗಿಯೇ ತರಾಟೆ ತೆಗೆದುಕೊಂಡಿದ್ದಾರೆ.
PublicNext
07/10/2021 07:51 pm