ಮಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮೊದಲು ಒಂದು ವಾರ ಶಾಖೆಗೆ ಬಂದು ಆರ್ ಎಸ್ ಎಸ್ ಬಗ್ಗೆ ತಿಳಿದುಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಮಂಗಳೂರು ನಗರದಲ್ಲಿ ಮಾತನಾಡಿದ ಅವರು, ಕಾಮಲೆ ರೋಗಿಗೆ ಜಗತ್ತೆಲ್ಲ ಹಳದಿಯಾಗಿ ಕಾಣುವಂತೆ ಕುಮಾರಸ್ವಾಮಿ ಆರ್ ಎಸ್ ಎಸ್ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಆರ್ ಎಸ್ ಎಸ್ ರಾಷ್ಟ್ರ ಭಕ್ತಿ, ದೇಶ ಸೇವೆಗೆ ಇನ್ನೊಂದು ಹೆಸರು. ಕುಮಾರ ಸ್ವಾಮಿ, ಕುಟುಂಬ ರಾಜಕಾರಣ, ಜಾತಿ ರಾಜಕಾರಣ ನಡೆಸುತ್ತಾ ಬಂದವರು. ತಮ್ಮ ಕುಟುಂಬ, ಜಾತಿಯವರನ್ನು ಆಯಕಟ್ಟಿನ ಜಾಗದಲ್ಲಿ ಇರಿಸಿಕೊಂಡು ಬಂದವರು. ಜೆಡಿಎಸ್ ಮುಖಂಡರಾಗಿದ್ದ ಸಿಂಧ್ಯಾರವರು ಆರ್ ಎಸ್ ಎಸ್ ಮೂಲಕ ಬಂದವರು. ದೇಶದಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ಸಂಸ್ಥೆಗಳನ್ನು ನಡೆಸುತ್ತ ದೇಶದ ಜನರಲ್ಲಿ ವ್ಯಕ್ತಿತ್ವ ನಿರ್ಮಾಣ, ರಾಷ್ಟ್ರ ನಿರ್ಮಾಣ ಮಾಡುವ ಕೆಲಸವನ್ನು ಆರ್ ಎಸ್ ಎಸ್ ಮಾಡುತ್ತಾ ಬಂದಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
PublicNext
07/10/2021 12:41 pm