ಪಂಜಾಬ್ : ಪಂಜಾಬ್ ಸಿ.ಎಂ.ಗತ್ತು ಏನ್ ರೀ ಅದು. ಮನೆಯಿಂದಲೇ ಹೆಲಿಕ್ಯಾಪ್ಟರ್ ನಿಂದಲೇ ಮೋಹಾಲಿ ವಿಮಾನ ನಿಲ್ದಾಣಕ್ಕೆ ಬರೋದೆ. ಹೌದು ರೀ, ಸಿಎಂ ಚರಣ್ ಜಿತ್ ಸಿಂಗ್ ಚನ್ನಿ ಮನೆಯಿಂದ ಮೋಹಾಲಿ ವಿಮಾನ ನಿಲ್ದಾಣಕ್ಕೆ ಬರಲು ಸರ್ಕಾರಿ ಹೆಲಿಕ್ಯಾಪ್ಟರ್ ಬಳಸಿ,ದೆಹಲಿಗೂ ತೆರಳಿದ್ದಾರೆ.
ವಿಮಾನ ನಿಲ್ದಾಣಕ್ಕೂ ಚನ್ನಿ ಮನೆಗೂ ಕೇವಲ 25 ಕಿಲೋಮೀಟರ್ ದೂರ ಇದೆ. ಅಷ್ಟೇ, ಸಿಎಂ ಅಲ್ವಾ ಅದಕ್ಕೇನೆ ಸರ್ಕಾರದ ಹೆಲಿಕ್ಯಾಪ್ಟರ್ ಬಳಸಿಕೊಂಡಿದ್ದಾರೆ. ಆದರೆ, 2017 ರಲ್ಲಿ ಕಾಂಗ್ರೆಸ್ ಪಕ್ಷ ತಮ್ಮ ಪ್ರಣಾಳಿಕೆಯಲ್ಲಿ ತುರ್ತು ಪರಸ್ಥಿತಿಯ ಹೊರತಾಗಿ, ಸರ್ಕಾರಿ ಹೆಲಿಕ್ಯಾಪ್ಟರ್ ಬಳಸೋದಿಲ್ಲ ಅಂತಲೇ ಹೇಳಿತ್ತು. ಈಗ ಅದು ಸುಳ್ಳಾಗಿದೆ.
PublicNext
07/10/2021 11:00 am