ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ನನ್ನ ಟಾರ್ಗೆಟ್ ಮಾಡಲಾಗಿದೆ. ಕಳೆದ ಒಂದು ತಿಂಗಳ ಹಿಂದೇನೆ ಮುಂದಿನ ಟಾರ್ಗೆಟ್ ಶಾರುಕ್ ಖಾನ್ ಅನ್ನೋ ಮಾಹಿತಿ ಕ್ರೈಂ ರಿಪೋರ್ಟ್ ಗೆ ರವಾನಿಸಲಾಗಿದೆ ಅಂತಲೇ ಸ್ಫೋಟಕ ಹೇಳಿಕೆ ನೀಡಿದ್ದಾರೆ ಮಹಾರಾಷ್ಟ್ರ ಮಂತ್ರಿ ನವಾಬ್ ಮಲಿಕ್.
ಕಿಂಗ್ ಖಾನ್ ಪುತ್ರ ಆರ್ಯನ್ ಖಾನ್ ಕೇಸ್ ಇಡೀ ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸಿದೆ.ಎಲ್ಲಿ ನೋಡಿದ್ರೆ ಈಗ ಇದೇ ಸುದ್ದಿ ಸೌಂಡ್ ಮಾಡ್ತಿದೆ. ಹೀಗಿರೋವಾಗ ಮಹಾರಾಷ್ಟ್ರ ಮಂತ್ರಿ ನವಾಬ್ ಮಲಿಕ್ ಹೇಳಿಕೆ, ಆರ್ಯನ್ ಬಂಧನವನ್ನ ಅನುಮಾನದಿಂದಲೇ ನೋಡೋ ಹಾಗೆ ಮಾಡಿದೆ. ಶಾರುಕ್ ಖಾನ್ ರನ್ನ ಟಾರ್ಗೆಟ್ ಮಾಡಲಾಗುತ್ತಿದೆ.ಒಂದು ತಿಂಗಳ ಹಿಂದೇನೆ ಈ ವಿಷಯ ಕ್ರೈಂ ವರದಿಗಾರರಿಗೆ ತಿಳಿದಿತ್ತು.ಆಯರ್ನ್ ಬಂಧನವೂ ಫೇಕ್ ಅಂತಲೇ ಮಂತ್ರಿ ನವಾಬ್ ಮಲಿಕ್ ಹೇಳಿಕೆ ನೀಡಿ ದಿಗ್ಭ್ರಾಂತಿ ಮೂಡಿಸಿದ್ದಾರೆ.
PublicNext
06/10/2021 05:36 pm