ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

40 ವರ್ಷದ ಹಿಂದಿನ ಆರ್‌ಎಸ್‌ಎಸ್ ಬೇರೆ ಈಗಿನ ಆರ್‌ಎಸ್‌ಎಸ್‌ ಬೇರೆ: ಕುಮಾರಸ್ವಾಮಿ

ಬೆಂಗಳೂರು: ಬಿಜೆಪಿಯ ಆರ್‌ಎಸ್‌ಎಸ್‌ನವರು ಹೇಗೆ ಚುನಾವಣೆಯ ಕಾರ್ಯತಂತ್ರ ರೂಪಿಸುತ್ತಾರೆ? ಅವರ ಕಾರ್ಯತಂತ್ರ ಹೇಗಿದೆ ಎಂಬ ಬಗ್ಗೆ ಸ್ವಲ್ಪ ಸ್ವಲ್ಪ ತಿಳಿದುಕೊಂಡಿದ್ದೇನೆ. ಅವರಿಗಿಂತ ಸ್ವಲ್ಪ ಮೇಲೆಯೇ ಪಕ್ಷ ಸಂಘಟನೆ ಮಾಡ್ತೀನಿ ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಚುನಾವಣೆಯ ತಂತ್ರಗಾರಿಕೆ ಹಲವು ಕಡೆ ಯಶಸ್ಸು ಪಡೆದಿದೆ. ಇರೋದನ್ನ ಹೇಳಬೇಕಾಗುತ್ತೆ. ಪಶ್ಚಿಮ ಬಂಗಾಳದಲ್ಲಿ ಸ್ವಲ್ಪ ಸೋಲಾಗಿದೆ.

40 ವರ್ಷದ ಆರ್‌ಎಸ್‌ಎಸ್ ಬೇರೆ ಈಗಿನ ಆರ್‌ಎಸ್‌ಎಸ್ ಬೇರೆ, ಅವರು ಬಹಳ ಸಬಲವಾಗಿದ್ದಾರೆ. ದೇಶದ ರಾಜಕಾರಣದಲ್ಲಿ ಕಾಂಗ್ರೆಸ್‌ ತುಂಬ ದುರ್ಬಲವಾಗುತ್ತಿದೆ, ದೇಶದಲ್ಲಿ ಬಿಜೆಪಿ ಪ್ರಬಲ ಆಗ್ತಿದೆ. ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗುತ್ತವೆ. ಚುನಾವಣೆಗೆ ಇನ್ನೂ 17 ತಿಂಗಳು ಸಮಯಾವಕಾಶ ಇದೆ. ಇಲ್ಲೂ ಪಂಜಾಬ್ ರೀತಿ ಆಗುತ್ತೊ ಏನೊ ಕಾದು ನೋಡೋಣಎಂದು ಕುಮಾರಸ್ವಾಮಿ ಹೇಳಿದರು.

Edited By : Nagesh Gaonkar
PublicNext

PublicNext

02/10/2021 07:02 pm

Cinque Terre

57.29 K

Cinque Terre

6

ಸಂಬಂಧಿತ ಸುದ್ದಿ