ಬೆಳಗಾವಿ: 'ಅಣ್ಣ ನಿಮಗೆ ಹೆಂಡಂದಿರಿದ್ದಾರೆ, ಮಗಳು ಇದ್ದಾಳೆ, ತಾಯಿ ಇದ್ದಾರೆ, ಅಕ್ಕ ತಂಗಿಯರಿದ್ದಾರೆ. ನೀವು ಮಾತಾಡಿದ್ದು ನನಗಲ್ಲ. ಅದು ಯಾರಿಗೆ ಅಂತ ನೀವೇ ವಿಮರ್ಶೆ ಮಾಡಕೊಳ್ಳಿ' ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಶಾಸಕಿ ಹೆಬ್ಬಾಳಕರ್ ರಾತ್ರಿ ರಾಜಕಾರಣ ಮಾಡುತ್ತಾರೆ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ಹೇಳಿದ್ದರು. ಈ ಹೇಳಿಕೆಗೆ ಲಕ್ಷ್ಮೀ ಹೆಬ್ಬಾಳಕರ್ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಅವರನ್ನು ಏನೂ ಕೇಳಲು ಬಯಸಲ್ಲ. ನಾನು ಅವರ ಪಕ್ಷದ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿರನ್ನು ಕೇಳುತ್ತೇನೆ ಇದು ನಿಮ್ಮ ಪಕ್ಷದ ಶಿಸ್ತು ಸಂಸ್ಕೃತಿನಾ? ಇದು ಸಂಜಯ್ ಪಾಟೀಲ್‌ರ ವೈಯಕ್ತಿಕ ಹೇಳಿಕೆಯಾ, ಪಕ್ಷದ ಹೇಳಿಕೆಯಾ ಸ್ಪಷ್ಟಪಡಿಸಬೇಕು. ಹೆಣ್ಣಿನ ಬಗ್ಗೆ ಮಾತನಾಡಿದವರ ಪರಿಸ್ಥಿತಿ ಏನಾಗಿದೆ ಇತಿಹಾಸ ಪುಟ ತಿರುವಿ ನೋಡಿ. ಇದನ್ನೆಲ್ಲ ಜನ ಗಮನಿಸುತ್ತಿದ್ದಾರೆ. ಜನರೇ ತಕ್ಕ ಉತ್ರ ನೀಡುತ್ತಾರೆ ಎಂದು ಶಾಸಕಿ ಲಕ್ಷ್ಮೀ ಹೇಳಿದ್ದಾರೆ.
PublicNext
01/10/2021 04:16 pm