ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದರಾಮಯ್ಯಗೆ ತಲೆ ಲೂಸ್ ಆಗಿದ್ದು ಗ್ಯಾರಂಟಿ: ಸದಾನಂದಗೌಡ ವಾಗ್ದಾಳಿ

ಚಿಕ್ಕಬಳ್ಳಾಪುರ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಲೆ ಸಂಪೂರ್ಣವಾಗಿ ಲೂಸ್ ಆಗಿದ್ದಂತು ಗ್ಯಾರಂಟಿ ಎಂದು ಮಾಜಿ ಕೇಂದ್ರ ಸಚಿವ ಸದಾನಂದಗೌಡ ವ್ಯಂಗ್ಯವಾಡಿದ್ದಾರೆ.

ಬಿಜೆಪಿಯವರು ತಾಲಿಬಾನ್ ಸಂಸ್ಕೃತಿಯವರು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನವರಿಗೆ ಪೂರ್ತಿ ತಲೆ ಕೆಟ್ಟಿದೆ. ರಾಜಕಾರಣದಲ್ಲಿ ಸ್ವಲ್ಪ ಕೆಟ್ಟಿದ್ದರೆ ಪರವಾಗಿಲ್ಲ. ಪೂರ್ತಿ ತಲೆ ಕೆಟ್ಟಿರಬಾರದು. ತಾಲಿಬಾನ್ ಆಗಿದ್ದರೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಕಾರಿನಲ್ಲಿ ಒಡಾಡಲು ಸಾಧ್ಯವೇ? ಇವರ ಕಾಲಿಗೆ ಹಗ್ಗ ಕಟ್ಟಿ ಬೀದಿಯಲ್ಲಿ ಎಳೆದುಕೊಂಡು ಹೋಗ್ತಿದ್ರು. ಇದನ್ನ ಅವರು ಅರ್ಥ ಮಾಡಿಕೊಳ್ಳಬೇಕು, ಬಾಯಿಗೆ ಬಂದದಂತೆ ಮಾತನಾಡಬಾರದು ಎಂದು ಕಿಡಿಕಾರಿದರು.

ಇನ್ನು ರಾಜ್ಯದಲ್ಲಿ ಬಲವಂತದ ಮತಾಂತರ ವಿಚಾರವಾಗಿ ಮಾತನಾಡಿದ ಅವರು, 'ಮತಾಂತರ ವಿರುದ್ಧ ರಾಜ್ಯ ಸರ್ಕಾರ ದಿಟ್ಟ ಕ್ರಮಕೈಗೊಳ್ಳುತ್ತದೆ. ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಇದರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ' ಎಂದರು.

Edited By : Vijay Kumar
PublicNext

PublicNext

29/09/2021 03:59 pm

Cinque Terre

53.35 K

Cinque Terre

5

ಸಂಬಂಧಿತ ಸುದ್ದಿ