ಮಂಗಳೂರು: ರಾಜ್ಯ ಉಪಚುನಾವಣೆಯಲ್ಲಿ ಬಿಜೆಪಿ ಶತಾಯಗತಾಯ ಗೆಲ್ಲುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು, ಈಗಾಗಲೇ ಮತಗಟ್ಟೆ ಕಾರ್ಯಗಳು ಅಲ್ಲಿ ನಡೆಯುತ್ತಿದೆ. ಚುನಾವಣೆ ಗೆಲ್ಲುವುದಕ್ಕೆ ನಾವು ಈಗಾಗಲೇ ತಯಾರಿ ಮಾಡುತ್ತಿದ್ದೇವೆ. ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಹೈಕಮಾಂಡ್ ಗೆ ಕಳುಹಿಸಲಾಗಿದೆ. ಅಂತಿಮ ತೀರ್ಮಾನ ಆಗಿಲ್ಲ. ಅಪೇಕ್ಷಿತರ ಪಟ್ಟಿ ಜಾಸ್ತಿ ಇದೆ. ಇದು ರಾಜಕಾರಣದಲ್ಲಿ ಸಹಜ ಎಂದರು. ಇನ್ನು ಈಗ ಕಾಂಗ್ರೆಸ್ ಮುಳುಗಿದ ಹಡಗು. ಇವತ್ತು ಕಾಂಗ್ರೆಸ್ ಬಿಟ್ಟು ಹತ್ತಾರು ಮಂದಿ ಶಾಸಕರು ಬಿಜೆಪಿ ಸೇರಲು ಮುಂದೆ ಬಂದಿದ್ದಾರೆ. ನಮ್ಮ ಸಂಪರ್ಕದಲ್ಲಿ ತುಂಬಾ ಜನ ಇದ್ದಾರೆ. ಮುಂದೆ ಕಾಂಗ್ರೆಸ್ ಗೆಲ್ಲಲ್ಲ. ಬಿಜೆಪಿಯೇ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
PublicNext
29/09/2021 02:04 pm