ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಮ್ಮ ದಮ್ಮಯ್ಯ ಅಂತೀನಿ ಕಣ್ರಯ್ಯ ದರಿದ್ರ ಬಿಜೆಪಿ ಸರ್ಕಾರ ಕಿತ್ತು ಬಿಸಾಕಿ : ಸಿದ್ದು ಮನವಿ

ಬೆಂಗಳೂರು: ರಾಜಕೀಯದಲ್ಲಿ ಪರಸ್ಪರ ಕೆಸರೆರಚಾಟ ಸಾಮಾನ್ಯ. ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪ ಮಾಡುವುದು ಸಾಮಾನ್ಯ ಆದ್ರೆ ಸಿದ್ದರಾಯ್ಯ ಜನರಲ್ಲಿ ಮಾಡಿದ ಮನವಿ ಕೇಳಿದ್ರೆ ನೀವು ಶಾಕ್ ಆಗೊದು ಗ್ಯಾರಂಟಿ. ಬಿಜೆಪಿ ಸರ್ಕಾರದಂತಹ ದರಿದ್ರ ಸರ್ಕಾರ ಬೇರೆ ಇಲ್ಲ. ನಿಮ್ಮ ದಮ್ಮಯ್ಯ ಅಂತೀನಿ ಈ ಸರ್ಕಾರವನ್ನು ಕಿತ್ತು ಬಿಸಾಕಿ ಸಿದ್ದು ಮನವಿ ಮಾಡಿದ್ದಾರೆ.

ನಗರದಲ್ಲಿಂದು ಅಯೋಜಿಸಲಾಗಿದ್ದ ದಿವಂಗತ ಆರ್. ಗುಂಡೂರಾವ್ 84 ನೇ ಜನ್ಮದಿನಾಚರಣೆ ಹಾಗೂ ರೇಷನ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಕಿಟ್ ವಿತರಿಸಿ ಮಾತನಾಡಿದ ಅವರು, ನಾನು ಏಳು ಕೆಜಿ ಅಕ್ಕಿ ಕೊಡ್ತಾ ಇದ್ದೆ. ಬಿಜೆಪಿ ಸರ್ಕಾರ ಬಂದು ಐದು ಕೆಜಿ ಕೊಡ್ತಾ ಇದ್ದಾರೆ. ಇವರಪ್ಪನ ಮನೆ ಗಂಟೇನು ಹೋಗುತ್ತೆ ಏಳು ಕೆಜಿ ಅಕ್ಕಿ ಕೊಟ್ರೆ? 7 ಕೆಜಿ ಕೊಟ್ಟಿದ್ದಕ್ಕೆ ಯಡಿಯೂರಪ್ಪ ಕೂಡ ಹೊಟ್ಟೆ ಉರ್ಕೊಂಡು ಬಿಟ್ರು. ನಮ್ಮ ಸರ್ಕಾರದ ಮತ್ತೆ ಬಂದ್ರೆ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಅಂದ್ರೆ ಡೊಂಗಿಗಳು, ಬರಿ ಸುಳ್ಳು ಹೇಳುವುದೇ ಅವರ ಕೆಲಸ. ರಾಜ್ಯ ಸರ್ಕಾರದಲ್ಲಿ ಒಬ್ಬನೆ ಒಬ್ಬ ಅಲ್ಪಸಂಖ್ಯಾತ ಮಂತ್ರಿ ಇಲ್ಲ. ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಈಗ ಆಪರೇಶನ್ ಮಾಡಿದ ಯಡಿಯೂರಪ್ಪ ಕಿತ್ತು ಹಾಕಿ, ಬೊಮ್ಮಾಯಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಬೊಮ್ಮಾಯಿ ಆರ್ ಎಸ್ ಎಸ್, ಯಡಿಯೂರಪ್ಪ ಹೇಳಿದಂತೆ ಕೇಳ್ತಾರೆ. ಇವರಿಂದ ಯಾವ ಅಭಯ ನಿರೀಕ್ಷೆಯನ್ನು ಮಾಡೋಕೆ ಸಾಧ್ಯವಿಲ್ಲ ಎಂದರು.

ಕುಮಾರಸ್ವಾಮಿ ಸುಳ್ಳು ಹೇಳ್ತಾನೆ. ಬಡವರು ಯಾರು ಹಸಿವಿನಿಂದ ಮಲಗಬಾರದು ಅಂತ ಅಕ್ಕಿ ಕೊಟ್ಟಿದ್ದೇವೆ. ಇದನ್ನು ಕೊಡಲು ಸುಳ್ಳು ಹೇಳಬೇಕಾ ಎಂದು ಏಕವಚನದಲ್ಲೇ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು. ಬಿಜೆಪಿಯವರು ತಾಲಿಬಾನ್ ಗಳೇ, ಸುಮ್ಮನೆ ಭಾರತ್ ಮಾತಾಕೀ ಜೈ ಅಂತ ಹೇಳ್ತಾರೆ, ಬಿಜೆಪಿ ಕಚೇರಿಯಲ್ಲಿ ಅವಾಗ ಮಹಾತ್ಮ ಗಾಂಧಿ, ಅಂಬೇಡ್ಕರ್ ಫೋಟೊ ಸಹ ಹಾಕ್ತಿರಲಿಲ್ಲ. ಈಗ ಮಹಾತ್ಮ ಗಾಂಧಿ, ಅಂಬೇಡ್ಕರ್ ಫೋಟೋ ಹಾಕ್ತಾರೆ. ಬಿಜೆಪಿ ಅವರು ಬಡವರ ವಿರೋಧಿಗಳು. ತಾಲಿಬಾನ್ ಗಳೇ ಬಿಜೆಪಿಯವರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶ್ರೀರಾಮುಲು ಅಂತ ಒಬ್ಬ ಮಂತ್ರಿ ಇದ್ದಾನೆ. ಅವನು ಪೆದ್ದ. ಕೊರೊನಾದಿಂದ ಸತ್ತವರಿಗೆ ದುಡ್ಡು ಕೊಟ್ಟಿದ್ದೇವೆ ಎಂದ. ಎಲ್ಲಪ್ಪ ದಾಖಲೆ ತೋರಿಸಿ ಅಂದ್ರೆ ತಬ್ಬಿಬ್ಬು ಆಗಿಬಿಟ್ಟ. ಬರಿ ಸುಳ್ಳು ಹೇಳುವುದೇ ಬಿಜೆಪಿ ಕೆಲಸ. ನಿಮ್ಮ ದಮ್ಮಯ್ಯ ಇಂತಹ ದರಿದ್ರ ಸರ್ಕಾರವನ್ನು ಕಿತ್ತುಹಾಕಿ ಅಂತ ಸಾರ್ವಜನಿಕರಲ್ಲಿ ಮನವಿ ಮಾಡಿದರು.

Edited By : Nirmala Aralikatti
PublicNext

PublicNext

26/09/2021 07:00 pm

Cinque Terre

50.88 K

Cinque Terre

49

ಸಂಬಂಧಿತ ಸುದ್ದಿ