ವಾಷಿಂಗ್ಟನ್: ಭಾರತದ ಪ್ರಧಾನಿ ಮೋದಿ ಸದ್ಯ ಅಮೆರಿಕ ಪ್ರವಾಸದಲ್ಲಿದ್ದಾರೆ. ಬೋಯಿಂಗ್ ವಿಮಾನದ ಮೂಲಕ ವಾಷಿಂಗ್ಟನ್ ಗೆ ತಲುಪಿರುವ ಮೋದಿ ವಿಮಾನದಿಂದ ಕೆಳಗೆ ಇಳಿಯುವಾಗ ಮಳೆ ಇಲ್ಲದಿದ್ದರೂ ಛತ್ರಿ ಬಳಸಿದ್ದಾರೆ.
ಇದರ ವಿಡಿಯೋ ಸಮೇತ ಟ್ವೀಟ್ ಮಾಡಿರುವ ಕೆಪಿಸಿಸಿ, ಪ್ರಧಾನಿ ಮೋದಿಯ ಕಾಲೆಳೆದಿದೆ. "ಅಲ್ಪನಿಗೆ ಐಶ್ವರ್ಯ ಸಿಕ್ಕರೆ... ವಿಮಾನದ ಮೆಟ್ಟಿಲಿಳಿಯಲು ಛತ್ರಿ ಬಿಚ್ಚುವನು! ಮೋದಿಜಿ ತಮ್ಮ ಪಿ ಆರ್ ಏಜೆನ್ಸಿ ಹೇಳಿದ ಟಾಸ್ಕ್‌ನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ! ಮಳೆಯಿಲ್ಲ, ಬಿಸಿಲಿಲ್ಲ, ಕೇವಲ 20 ಮೆಟ್ಟಿಲು ಇಳಿಯಲು ಕೂಡ ಛತ್ರಿ ಬಿಚ್ಚಿತ್ತಾರೆ! ನಮ್ಮ ಪ್ರಧಾನಿಗೆ ವಿದೇಶಿಯರೆದುರು ನಗೆಪಾಟಲಿಗೆ ಈಡಾಗುವುದು ಅಭ್ಯಾಸವಾಗಿಬಿಟ್ಟಿದೆ" ಎಂದು ಟ್ವೀಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕಾಲೆಳೆದಿದೆ.
PublicNext
23/09/2021 03:32 pm