ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಧಾನಸಭಾ ಅಧಿವೇಶನದಲ್ಲಿ ಸದ್ದು ಮಾಡಿದ ಚಿರತೆ: ಚಿರತೆಯದೇ ಚರ್ಚೆ....!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಈಗ ಬೆಂಗಳೂರಿನ ವಿಧಾನಸಭಾ ಅಧಿವೇಶನದಲ್ಲಿಯೂ ಕೂಡ

ಸದ್ದು ಮಾಡಿದೆ.

ಹೌದು.. ಇಂದು ನಡೆದ ವಿಧಾನಸಭಾ ಕಲಾಪದಲ್ಲಿ ಹು-ಧಾ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರು ವಾಣಿಜ್ಯನಗರಿ ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷವಾದ ಬಗ್ಗೆ ಪ್ರಸ್ತಾಪಿಸಿದ್ದು, ಹುಬ್ಬಳ್ಳಿಯ ಚಿರತೆ ಈಗ ವಿಧಾನಸೌಧದಲ್ಲಿ ಕೂಡ ಸದ್ದು ಮಾಡಿದ್ದು, ವಿಶೇಷವಾಗಿದೆ.

ಇನ್ನೂ ಈ ಬಗ್ಗೆ ಸಭಾಪತಿ ವಿಶ್ವೇಶ್ವರ ಕಾಗೇರಿಯವರಿಗೆ ಶಾಸಕ ಪ್ರಸಾದ ಅಬ್ಬಯ್ಯ ಅವರು ಪ್ರಶ್ನಿಸಿದ್ದು, ಸುಮಾರು ಏಂಟು ದಿನಗಳಿಂದ ಜನರಲ್ಲಿ ಆತಂಕ ಸೃಷ್ಟಿಸಿದೆ.‌ ಈ ನಿಟ್ಟಿನಲ್ಲಿ ಯಾವ ಕ್ರಮಗಳನ್ನು ಕೈಗೊಂಡಿದ್ದಾರೆ ಅರಣ್ಯ ಇಲಾಖೆಯವರು ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಚಿರತೆ ನೃಪತುಂಗ ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ಸಂಚರಿಸುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆಯ ಸಚಿವರಾದ ಉಮೇಶ ಕತ್ತಿಯವರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರವಾಗಿ ಮತ್ತಷ್ಟು ಕಾರ್ಯಾಚರಣೆ ತಂತ್ರಗಳನ್ನು ಅನುಸರಿಸಿ ಜನರ ಆತಂಕ‌ ದೂರ ಮಾಡುವ ಬಗ್ಗೆ ‌ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.

Edited By : Nagesh Gaonkar
PublicNext

PublicNext

22/09/2021 04:46 pm

Cinque Terre

85.94 K

Cinque Terre

6

ಸಂಬಂಧಿತ ಸುದ್ದಿ