ಪಂಜಾಬ್ : ಸಾಕಷ್ಟು ಒತ್ತಡದ ಹಿನ್ನೆಲೆಯಲ್ಲಿ ಇಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಪಂಜಾಬ್ ನ ನಿರ್ಗಮಿತ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ದೇಶದ ಹಿತದೃಷ್ಠಿಯಿಂದ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ಅವರ ಹೆಸರನ್ನು ನಾನು ಬಲವಾಗಿ ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವಜೋತ್ ಸಿಂಗ್ ಸಿಧು ವಿರುದ್ಧ ನೇರವಾಗಿ ಆಕ್ರೋಶ ಹೊರಹಾಕಿದ ಕ್ಯಾಪ್ಟನ್, ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯ. ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಸಿಧು ಅವರ ಸ್ನೇಹಿತ. ಪಾಕ್ ಸೇನೆಯ ಮುಖ್ಯಸ್ಥ ಜ.ಖುಮರ್ ಜಾವೆದ್ ಬಕ್ವಾ ಜೊತೆ ಸಿಧು ಉತ್ತಮ ಸಂಬಂಧ ಹೊಂದಿದ್ದಾರೆ. ಹಾಗಾಗಿ ದೇಶದ ಹಿತದೃಷ್ಠಿಯಿಂದ ನಾನು ಅವರ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಸೂಚಿಸುವುದನ್ನು ಬಲವಾಗಿ ವಿರೋಧಿಸುತ್ತೇನೆ ಎಂದು ನುಡಿದರು.
ನವಜೋತ್ ಸಿಂಗ್ ಸಿಧು ಓರ್ವ ಅಸಮರ್ಥ ವ್ಯಕ್ತಿ. ನಾನು ನೀಡಿದ್ದ ಒಂದು ಇಲಾಖೆಯನ್ನೂ ಸರಿಯಾಗಿ ನಡೆಸಲು ಅವನಿಂದ ಸಾಧ್ಯವಾಗಲಿಲ್ಲ. ಏಳು ತಿಂಗಳಿನ ಅವಧಿಯಲ್ಲಿ ಒಂದು ಖಡತಗಳನ್ನೂ ವಿಲೇವಾರಿ ಮಾಡಲಿಲ್ಲ ಎಂದು ಹರಿಹಾಯ್ದರು.
PublicNext
18/09/2021 10:20 pm