ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ಕೆಲವು ಅಧಿಕಾರಿಗಳು ಮಾತ್ರ ಭ್ರಷ್ಟರಾಗಿ ಬದುಕುತ್ತಿದ್ದಾರೆ. ಕೇವಲ ಒಂದು ಬ್ಯಾಗ್ ವಿಚಾರದಲ್ಲಿ ಆರೂವರೆ ಕೋಟಿ ರೂಪಾಯಿ ನುಂಗಿದ್ದಾರೆ ಎಂದು ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಆರೋಪಿಸಿದ್ದಾರೆ. ಜೊತೆಗೆ ತಮ್ಮ ಜೇಬಿನಲ್ಲಿದ್ದ ಬ್ಯಾಗ್ ಹೊರತೆಗೆದು ಸದನದಲ್ಲಿ ಪ್ರದರ್ಶನ ಮಾಡಿದ್ದಾರೆ. ಈ ಮೂಲಕ ರೋಹಿಣಿ ಸಿಂಧೂರಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಕೆಲ ಐಎಎಸ್ ಅಧಿಕಾರಿಗಳು 35 ಲಕ್ಷ ರೂ. ವೆಚ್ಚದಲ್ಲಿ ಈಜುಕೊಳ ಕಟ್ಟಿ ಶೋಕಿ ಮಾಡುತ್ತಾರೆ. ಇವರ ವಿರುದ್ಧ ಯಾರು ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಶ್ನೆ ಮಾಡಿದರು. ನಿವೃತ್ತಿಯ ಬಳಿಕ ಇಂಥವರು ನಮ್ಮ ವಿರುದ್ಧವೇ ಚುನಾವಣೆಗೆ ನಿಲ್ಲುತ್ತಾರೆ. ಇಂಥವರಿಂದ ನಮಗೆ ರಕ್ಷಣೆ ಕೊಡಿಸಿ. ಅವರ ವಸತಿ ಗೃಹಕ್ಕೆ ಯಾಕೆ 5 ಎಕರೆ ಭೂಮಿ ಬೇಕು? ಐಎಎಸ್, ಐಪಿಎಸ್ ಅಧಿಕಾರಿಗಳ ಮನೆಗಳ ಮೇಲೆ ಎಂದಾದರೂ ಐಟಿ ರೇಡ್ ಆಗುತ್ತಾ? ಕೇವಲ ಎಂಜಿನಿಯರ್, ಸಣ್ಣಪುಟ್ಟ ಅಧಿಕಾರಿಗಳ ಮನೆಗಳ ಮೇಲೆ ಮಾತ್ರ ರೇಡ್ ಆಗುತ್ತೆ ಎಂದು ಸಾ.ರಾ.ಮಹೇಶ್ ಸದನದಲ್ಲಿ ಭಾವೋದ್ವೇಗದಿಂದ ಮಾತನಾಡಿದರು.
PublicNext
16/09/2021 04:26 pm