ಚಿತ್ರದುರ್ಗ : ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಹಿಂದುತ್ವ ವಿಚಾರವನ್ನು ತೆಗೆದುಕೊಂಡು ಸಿದ್ದಾಂತ ಹೇಳಲು ಹೊರಟಿದೆ ಎಂದು ಕಾಂಗ್ರೆಸ್ ಓಬಿಸಿ ರಾಜ್ಯಾಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ವ್ಯಂಗ್ಯವಾಡಿದರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ದೇವಾಲಗಳನ್ನು ಒಡೆದು ಹಾಕುವ ಆದೇಶವನ್ನು ಸುಪ್ರೀಂಕೋರ್ಟ್ ಕೊಟ್ಟಿಲ್ಲ. ನಂಜನಗೂಡಿನಲ್ಲಿ ಹಬ್ಬದಂದು ದೇವಸ್ಥಾನವನ್ನು ಧ್ವಂಸ ಮಾಡಿರುವುದು ಆಗೋರವಾದ ಅಪರಾಧ ಎಂದು ಹೇಳಿದರು.
ದೇಗುಲ ವಿಚಾರವಾಗಿ ರಾಜ್ಯದ ಒಬ್ಬೊಬ್ಬ ಮಂತ್ರಿಗಳು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ದೇವಸ್ಥಾನ ಹೊಡೆಯಲು ಮುಂದಾದರೇ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ಕೈಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು. ದೇವಸ್ಥಾನ ಧ್ವಂಸ ಮಾಡುವುದನ್ನು ಕೂಡಲೇ ಸರ್ಕಾರ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಇನ್ನು ಜಿ.ಪ. ಹಾಗೂ ತಾ.ಪ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಸರ್ಕಾರ ಚುನಾವಣೆ ಮುಂದೂಡಿಕೆ ಮಾಡಲು ಹೊರಾಟಿದ್ದು, ಜಿ.ಪ. ಮತ್ತು ತಾ. ಪಂ. ಚುನಾವಣೆ ಮುಂದೂಡಿ ಸರ್ಕಾರ ಜನರಿಗೆ ಮಣ್ಣು ಮುಕ್ಕಿಸುತ್ತಿದೆ. ಈಗಾಗಲೇ ಚುನಾವಣೆ ಘೋಷಣೆ ಆಗಿ, ಕೆಟಗರಿ, ಕ್ಷೇತ್ರ ವಿಂಗಡನೆ ಆಗಿದೆ.
ಕ್ಷೇತ್ರದಲ್ಲಿ ಅಭ್ಯರ್ಥಿಗಳು ಒಂದೆರಡು ಬಾರಿ ಪ್ರಚಾರ ನಡೆಸಿದ್ದಾರೆ. ಸರ್ಕಾರ ವಿಕೇಂದ್ರೀಕರಣಕ್ಕೆ ಕೈ ಹಾಕಿರುವುದು ಇದು ಘೋರವಾದ ಅಪರಾಧ.ಕೂಡಲೇ ಚುನಾವಣೆ ನಡೆಸುವಂತೆ ಲಕ್ಷ್ಮೀನಾರಾಯಣ ಆಗ್ರಹ..
ಹಿಂದಿನ ಸರ್ಕಾರದ ಹಣವನ್ನು ಹಿರಿಯೂರು ಅಭಿವೃದ್ಧಿಗೆ ಬಳಸುತ್ತಿದ್ದು, ಹಿರಿಯೂರಿಗೆ ಸಿದ್ದರಾಮಯ್ಯ ಸರ್ಕಾರ 300 ಕೋಟೆ ಅನುದಾನ ಬಿಡುಗಡೆ ಮಾಡಿದ್ದರು. ಈಗಿನ ಬಿಜೆಪಿ ಸರ್ಕಾರ ಹಿರಿಯೂರಿಗೆ ಅನುದಾನ ನೀಡಿಲ್ಲ.
ಮಾಜಿ ಸಚಿವ ಡಿ ಸುಧಾಕರ್ ತಂದಿದ್ದ ಕಾಮಗಾರಿಗಳು ಈಗ ಚಾಲ್ತಿಯಲ್ಲಿವೆ ಎಂದು ಹೆಸರು ಬಳಸದೇ ಶಾಸಕಿ ಕೆ. ಪೂರ್ಣಿಮಾಗೆ ಎಂ.ಡಿ. ಲಕ್ಷ್ಮೀನಾರಾಯಣ ಪರೋಕ್ಷ ಟಾಂಗ್ ನೀಡಿದರು.
PublicNext
16/09/2021 12:09 pm