ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಜಾತಶತ್ರುವಿನ ಅಂತಿಮ ಯಾತ್ರೆ: ಉಡುಪಿ ಸ್ತಬ್ಧ!

ವರದಿ: ರಹೀಂ ಉಜಿರೆ

ಉಡುಪಿ: ಹಿರಿಯ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರಿಗೆ ತವರು ಜಿಲ್ಲೆ ಉಡುಪಿಯಲ್ಲಿ ಅಂತಿಮ ನಮನ ಸಲ್ಲಿಕೆಯಾಗಿದೆ. ರಾಜ್ಯ ಮತ್ತು ದೆಹಲಿಗೆ ಕೊಂಡಿಯಂತಿದ್ದ ಹಿರಿಯ ನಾಯಕನನ್ನು ಕಳೆದುಕೊಂಡು ಕಾಂಗ್ರೆಸ್ ಪಕ್ಷ ಮಾತ್ರವಲ್ಲ, ಉಡುಪಿ ಜಿಲ್ಲೆಯೂ ಅನಾಥವಾಗಿದೆ.....

ಇವತ್ತು ಬೆಳಿಗ್ಗೆ 9.30 ವೇಳೆಗೆ ಮಂಗಳೂರಿನ ಆಸ್ಪತ್ರೆಯಿಂದ ನೇರವಾಗಿ ಪಾರ್ಥಿವ ಶರೀರವನ್ನು ಉಡುಪಿಯ ಕವಿ ಮುದ್ದಣ ರಸ್ತೆಯಲ್ಲಿರುವ ಶೋಕಮಾತಾ ಇಗರ್ಜಿ ಗೆ ಕರೆತರಲಾಯಿತು. ಮಾರ್ಗಮಧ್ಯದಲ್ಲಿ ಆಸ್ಕರ್ ಅಭಿಮಾನಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಆಸ್ಕರ್ ಕುಟುಂಬ ನೆಚ್ಚಿಕೊಂಡಿದ್ದ ಶೋಕಮಾತಾ ಇಗರ್ಜಿಯಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೋ ಧಾರ್ಮಿಕ ವಿಧಿ ನಡೆಸಿಕೊಟ್ಟರು. ವಿವಿಧ ಧರ್ಮಗುರುಗಳ ಉಪಸ್ಥಿತಿಯಲ್ಲಿ ಅಂತಿಮ ಪ್ರಾರ್ಥನೆ ಸಲ್ಲಿಸಲಾಯಿತು. ಪಾರ್ಥಿವ ಶರೀರಕ್ಕೆ ಜಲಪ್ರೋಕ್ಷಣೆ ಮಾಡುವ ಮೂಲಕ ಸದ್ಗತಿಗಾಗಿ ಪ್ರಾರ್ಥಿಸಲಾಯಿತು. ವಿಶೇಷ ಬಲಿಪೂಜೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಶೋಕಮಾತಾ ಚರ್ಚ್ ನಲ್ಲಿ ಪೂಜೆ ಮುಗಿದ ಬಳಿಕ ಪಾರ್ಥಿವ ಶರೀರವನ್ನು ಆಸ್ಕರ್ ಫರ್ನಾಂಡಿಸ್ ಅವರ ನೆಚ್ಚಿನ ಮನೆಗೆ ಕರೆದೊಯ್ಯಲಾಯಿತು. ಇದೇ ಮನೆಯನ್ನು ಪಕ್ಷಕ್ಕೆ ಬಿಟ್ಟುಕೊಟ್ಟು ಜಿಲ್ಲಾ ಕಚೇರಿ ಮಾಡಿದ್ದರು .ಇದೇ ಕಾರಣಕ್ಕೆ ಅಂತಿಮ ಪ್ರಯಾಣದ ವೇಳೆ ಪಾರ್ಥಿವ ಶರೀರವನ್ನು ಮನೆಯಲ್ಲಿ ಇರಿಸಿ ಪ್ರಾರ್ಥಿಸಲಾಯಿತು.ಅಲ್ಲಿಂದ ನೇರವಾಗಿ ಪಾರ್ಥಿವ ಶರೀರವನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಕೊಂಡೊಯ್ಯಲಾಯಿತು. ಸುಮಾರು ಎರಡು ಗಂಟೆಗಳಕಾಲ ಗಣ್ಯರು ಕಾರ್ಯಕರ್ತರು ಉಡುಪಿ ಜಿಲ್ಲೆಯ ನಾಗರಿಕರು ಬಂದು ಅಂತಿಮ ದರ್ಶನ ಕೈಗೊಂಡರು. ಕೆಪಿಸಿಸಿ ರಾಜ್ಯ ಅಧ್ಯಕ್ಷ ಡಿಕೆ ಶಿವಕುಮಾರ್ ಕಚೇರಿಗೆ ಭೇಟಿ ನೀಡಿದರು. ಪಾರ್ಥಿವ ಶರೀರದ ಮುಂದೆ ಗಳಗಳನೆ ಅಳುತ್ತಿದ್ದ ಆಸ್ಕರ್ ಪತ್ನಿ ಹಾಗೂ ಮಕ್ಕಳನ್ನು ಸಂತೈಸಿದರು. ಆಸ್ಕರ್ ಕಾಂಗ್ರೆಸ್ ಪಕ್ಷಕ್ಕೆ- ದೇಶಕ್ಕೆ ಕೊಟ್ಟ ಕೊಡುಗೆಗಳನ್ನು ಸ್ಮರಿಸಿ ಕೊಂಡಾಡಿದರು. ಈ ನಡುವೆ ಚರ್ಚ್ ಆವರಣಕ್ಕೆ ಬಂದಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ ರಾಜ್ಯ ಸರಕಾರದ ವತಿಯಿಂದ ಅಂತಿಮ ಗೌರವ ಸಲ್ಲಿಸಿದರು.

ಒಂಬತ್ತು ಬಾರಿ ಜನಪ್ರತಿನಿಧಿ ಆಗುವ ಮೂಲಕ ಉಡುಪಿ ಜಿಲ್ಲೆಗೆ ಅವರು ಕೊಟ್ಟ ಕೊಡುಗೆಗಳು ಯಾವತ್ತೂ ಸ್ಮರಣೀಯವಾಗಿ ಉಳಿಯಲಿವೆ.

Edited By : Manjunath H D
PublicNext

PublicNext

14/09/2021 04:19 pm

Cinque Terre

90.84 K

Cinque Terre

3

ಸಂಬಂಧಿತ ಸುದ್ದಿ