ಹುಬ್ಬಳ್ಳಿ: ಹು-ಧಾ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಹಿನಾಯ ಸೋಲು ಕಂಡಿರುವ ಹಿನ್ನಲೆಯಲ್ಲಿ, ನೈತಿಕ ಹೊಣೆ ಹೊತ್ತು ಎನ್.ಹೆಚ್.ಕೋನರೆಡ್ಡಿ ಅವರು, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ರಾಜೀನಾಮೆಯನ್ನ ರಾಷ್ಟ್ರೀಯ ಅಧ್ಯಕ್ಷ ದೇವೆಗೌಡರಿಗೆ ಸಲ್ಲಿಸಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಕನಿಷ್ಟ ಹತ್ತು ಸ್ಥಾನ ಗೆಲ್ಲೋ ವಿಸ್ವಾಸವಿತ್ತು, ಆದ್ರೆ ಕೇವಲ ಒಬ್ಬೆ ಒಬ್ಬ ಅಭ್ಯರ್ಥಿ ಗೆದ್ದಿದ್ದಾರೆ. ಇದಕ್ಕೆ ಅಸಮಾಧಾನ ಆಗಿದೆ. ಬಿಜೆಪಿ ಆಡಳಿತಯಂತ್ರ ದುರಪಯೋಗ ಮಾಡಿ ಚುನಾವಣೆ ಗೆದ್ದಿದೆ. ನ್ಯಾಯಲಯದ ಮಾನಿಟಿಂಗ್ ನಲ್ಲಿ ಚುನಾವಣೆ ನಡೆಯಬೇಕು, ಚುನಾವಣೆ ಆಯೋಗ ಕೂಡಾ ಸರ್ಕಾರದ ಅಧೀನದಲ್ಲಿ ನಡೆಯುತ್ತಿದೆ ಎಂದರು. ಹೀಗಾದ್ರೆ ಪ್ರಜಾಪ್ರಭುತ್ವಕ್ಕೆ ದಕ್ಕೆ ಬರುತ್ತೆ ಎಂದರು.
PublicNext
07/09/2021 12:16 pm