ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಸತ್ತರೆ ಉಚಿತವಾಗಿ ಶವ ಸಂಸ್ಕಾರ': ಬಿಜೆಪಿ ಪ್ರಣಾಳಿಕೆಗೆ ಬೆಳಗಾವಿ ಜನ ಫುಲ್ ಶಾಕ್.!

ಬೆಳಗಾವಿ: ಕುಂದಾನಗರಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣಾ ಕಾವು ಜೋರಾಗಿದ್ದು, ಸೆಪ್ಟೆಂಬರ್ 3ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.

ಬೆಳಗಾವಿ ಮಹಾನಗರಕ್ಕಾಗಿಯೇ ಬಿಜೆಪಿಯಿಂದ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದ್ದು, 'ಸತ್ತರೆ ಉಚಿತವಾಗಿ ಶವ ಸಂಸ್ಕಾರಕ್ಕೆ ವ್ಯವಸ್ಥೆ' ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿರುವ ಅಂಶ ಕಂಡು ಜನರು ಬೆಚ್ಚಿಬಿದ್ದಿದ್ದಾರೆ. ಅಷ್ಟೇ ಅಲ್ಲದೆ 'ಬಿಜೆಪಿ ಪಕ್ಷ ಜನರ ಸಾವನ್ನೇ ಬಯಸುತ್ತಿದೆಯಾ?' ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಣಾಳಿಕೆಯ ಪ್ರಮುಖ ಅಂಶಗಳು

* ನೂರು ರೂಪಾಯಿ ಬಾಂಡ್ ಮೇಲೆ ಜಮೀನು ಖರೀದಿಸಿ ಮನೆ ನಿರ್ಮಿಸಿಕೊಂಡ ಅಕ್ರಮ ಮನೆ ಸಕ್ರಮ.

* ಮಹಾನಗರ ಪಾಲಿಕೆಯಿಂದ ಉಚಿತ ಶವಸಂಸ್ಕಾರಕ್ಕೆ ವ್ಯವಸ್ಥೆ.

* ಬೆಳಗಾವಿ ನಗರವನ್ನ ಕಸಮುಕ್ತ ನಗರವನ್ನಾಗಿಸುವ ಗುರಿ.

* ನಗರ ಸ್ವಚ್ಚತೆ, ಮನೆ ಮನೆಗಳಿಂದ ಕಸ ಸಂಗ್ರಹಕ್ಕೆ ಸಮರ್ಪಕ ವ್ಯವಸ್ಥೆ ಜಾರಿ.

* ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ನಾಲೆಗಳ ಕಾಂಕ್ರಿಟ್​.

Edited By : Vijay Kumar
PublicNext

PublicNext

29/08/2021 10:21 am

Cinque Terre

51.82 K

Cinque Terre

8

ಸಂಬಂಧಿತ ಸುದ್ದಿ