ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ರೈತರ ತಲೆ ಒಡೆಯಿರಿ': ಪೊಲೀಸರಿಗೆ ಉಪವಿಭಾಗಾಧಿಕಾರಿ ನಿರ್ದೇಶನ.!

ಚಂಡೀಗಡ: ಬಿಜೆಪಿ ಮುಖಂಡರ ವಿರುದ್ಧ ಪ್ರತಿಭಟನೆ ನಡೆಸಿದ್ದ ರೈತರ ತಲೆಗೆ ಒಡೆಯುವಂತೆ ಹರಿಯಾಣದ ಕರ್ನಾಲ್ ಉಪ ವಿಭಾಗಧಿಕಾರಿ ಆಯುಷ್ ಸಿನ್ಹಾ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಬಿಜೆಪಿ ಸಭೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಶನಿವಾರ ಹರಿಯಾಣ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಘಟನೆಯಲ್ಲಿ ಸುಮಾರು 10 ರೈತರು ಗಾಯಗೊಂಡಿದ್ದಾರೆ. ಈ ಮಧ್ಯೆ ಕರ್ನಾಲ್ ಉಪ ವಿಭಾಗಧಿಕಾರಿ ಆಯುಷ್ ಸಿನ್ಹಾ, ಯಾವುದೇ ಪ್ರತಿಭಟನಾಕಾರರು ಆ ಪ್ರದೇಶದಲ್ಲಿ ನಿರ್ದಿಷ್ಟ ಬ್ಯಾರಿಕೇಡ್‌ನಿಂದ ಆಚೆ ಹೋಗಬಾರದು ಎಂದು ಪೊಲೀಸರಿಗೆ ಸೂಚಿಸುವುದು ವಿಡಿಯೋದಲ್ಲಿದೆ.

ಇದು ಅತ್ಯಂತ ಸರಳ ಮತ್ತು ಸ್ಪಷ್ಟವಾಗಿದೆ. ಅವರು ಯಾರೇ ಆಗಿರಲಿ, ಎಲ್ಲಿಂದಲೇ ಬಂದವರಾಗಿರಿ, ಯಾರೊಬ್ಬರೂ ಅಲ್ಲಿಗೆ ತಲುಪಲು ಅವಕಾಶ ನೀಡುವಂತಿಲ್ಲ. ಯಾವುದೇ ಸಂದರ್ಭದಲ್ಲಿಯೂ ಈ ಲಕ್ಷ್ಮಣ ರೇಖೆಯನ್ನು ಉಲ್ಲಂಘಿಸಲು ನಾವು ಅವಕಾಶ ಕೊಡುವುದಿಲ್ಲ, ಹಾಗೇನಾದರೂ ಆದರೆ ನಿಮ್ಮ ಲಾಠಿಯಿಂದ ಅವರ ತೆಲೆಗೆ ಒಡೆಯಿರಿ. ಇದು ಅತ್ಯಂತ ಸ್ಪಷ್ಟವಾಗಿದೆ. ನಿಮಗೆ ಇನ್ಯಾವುದೇ ಸೂಚನೆಯ ಅಗತ್ಯವಿಲ್ಲ ಎಂದು ಸಿನ್ಹಾ ವಿಡಿಯೋದಲ್ಲಿ ಹೇಳಿದ್ದಾರೆ.

ಈ ವಿಡಿಯೋವನ್ನು ತಿರುಚಲಾಗಿದೆ ಮತ್ತು ಉಪ ವಿಭಾಗಾಧಿಕಾರಿ ಹಾಗೆ ಹೇಳಿರಲಿಲ್ಲ ಎಂದು ನಾನು ಆಶಿಸಿದ್ದೇನೆ. ಆದರೆ ಅವರು ಹಾಗೆ ಹೇಳಿದ್ದೆ ಆದಲ್ಲಿ ನಮ್ಮ ಪ್ರಜೆಗಳೊಂದಿಗೆ ಹೀಗೆ ನಡೆದುಕೊಳ್ಳುವುದು ಪ್ರಜಾಸತ್ತಾತ್ಮಕ ಭಾರತಕ್ಕೆ ಸ್ವೀಕಾರರ್ಹವಲ್ಲ ಎಂದು ಬಿಜೆಪಿ ಮುಖಂಡ ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Edited By : Vijay Kumar
PublicNext

PublicNext

29/08/2021 09:24 am

Cinque Terre

86.56 K

Cinque Terre

24

ಸಂಬಂಧಿತ ಸುದ್ದಿ