ಚಂಡೀಗಢ : ಪಂಜಾಬ್ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವಾಗ ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದ್ದು ಸಿಎಂ ವಿರುದ್ಧ ಹಲವು ಶಾಸಕರು ಹಾಗೂ ಸಚಿವರು ಬಂಡಾಯವೆದ್ದು, ಮುಖ್ಯಮಂತ್ರಿ ಬದಲಾವಣೆಗೆ ಆಗ್ರಹಿಸಿದ್ದಾರೆ.
ಚುಣಾವಣೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ಅಮರೀಂದರ್ ಸಿಂಗ್ ವಿಫಲರಾಗಿದ್ದು, ಅವರ ಮೇಲೆ ನಾವು ನಂಬಿಕೆಯನ್ನು ಕಳೆದುಕೊಂಡಿರುವುದಾಗಿ ಬಂಡಾಯ ಮುಖಂಡರು ಹೇಳಿದ್ದಾರೆ. ಅಲ್ಲದೇ ಈ ಸಂಬಂಧ ಹೈಕಮಾಂಡ್ ಮೊರೆ ಹೋಗಲು ತೀರ್ಮಾನಿಸಿದ್ದಾರೆ.
ಸಚಿವರಾದ ಸುಖಜಿಂದರ್ ರಂಧಾವಾ, ತೃಪ್ತ್ ರಾಜಿಂದರ್ ಬಜ್ವಾ, ಸುಖಬಿಂದರ್ ಸರ್ಕಾರಿಯಾ, ಚರಣ್ ಜಿತ್ ಚನ್ನಿ ಹಾಗೂ 23 ಮಂದಿ ಕಾಂಗ್ರೆಸ್ ಶಾಸಕರು ಬಜ್ವಾ ಅವರ ನಿವಾಸದಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ಶೀಘ್ರದಲ್ಲೇ ನಿಯೋಗ ಸಮೇತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಆಗಿ ಅಹವಾಲು ಸಲ್ಲಿಸಲಿದ್ದಾರೆ ಎಂದು ಎನ್ನಲಾಗಿದೆ.
PublicNext
25/08/2021 09:49 pm