ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ಯಾನರ್ ಕಟ್ಟುವಾಗ ಹೊಡೆದು ಓಡಿಸುತ್ತಿದ್ದರು, ದೌರ್ಜನ್ಯಕ್ಕೆ ಹೆದರದೆ ನಾಯಕನಾದೆ: ಕೇಂದ್ರ ಸಚಿವ ಎ. ನಾರಾಯಣಸ್ವಾಮಿ

ಚಿತ್ರದುರ್ಗ : ನಾರಾಯಣಸ್ವಾಮಿ ಅಂದರೆ ಘರ್ಜನೆ ನ್ಯಾಯ, ಧರ್ಮದ ಪರವಾದ ಘರ್ಜನೆ ಮೂಲಕ ಜನಸೇವೆ ಮಾಡಲು ಬಂದಿರುವೆ ಎಂದು ಸಾಮಾಜಿಕ ಮತ್ತು ಯುವ ಸಬಲೀಕರಣ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.

ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಮೈದಾನದಲ್ಲಿ ನಡೆದ ಜನಾರ್ಶಿವಾದ ಯಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೋವಿಡ್ ಸಂದರ್ಭದಲ್ಲಿ ನನಗೆ ಒಂದು‌ ನೋವು ಕಾಡುತ್ತಿದೆ. ಕಾರಣ ಜೀವಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ.

ನರಕ‌ ನೋಡಿದ್ದೇನೆ ಎಂದರು. ಕೋವಿಡ್ ಸಂದರ್ಭದಲ್ಲಿ ಯಾತ್ರೆ ಬೇಕಾ ಎಂದು ಕೇಂದ್ರ ನಾಯಕರನ್ನು ಪ್ರಶ್ನೆ ಮಾಡಿದಾಗ, ಇದಕ್ಕೆ ನಾಯಕರು ಕೋವಿಡ್ ನಿಯಮ‌ ಪಾಲಿಸಿ ಎಂದು ಸೂಚನೆ ನೀಡಿದ್ದು, ಅದರಂತೆ ಯಾತ್ರೆ ಕೈಗೊಂಡಿದ್ದೇವೆ ಎಂದರು.

20 ವರ್ಷದ ಹಿಂದೆ ಬಿಜೆಪಿಯನ್ನು ಬ್ರಾಹ್ಮಣರ ಪಕ್ಷ, ದಲಿತರ ವಿರೋಧಿ ಪಕ್ಷ,ಎಂದು ಹೀಯಾಳಿಸಲಾಗುತ್ತಿತ್ತು.

ಬ್ಯಾನರ್ ಕಟ್ಟುವಾಗ ಹೊಡೆದು ಓಡಿಸುತ್ತಿದ್ದರು, ಅದನ್ನೆಲ್ಲಾ ಹೆದುರಿಸಿ, ದೌರ್ಜನ್ಯಕ್ಕೆ ಹೆದರದ ವ್ಯಕ್ತಿ‌ ನಾಯಕನಾದೇ ನಿಮ್ಮೆಲ್ಲರ ಒಂದು ಮತದಿಂದ ನಾನು ಇಂದು ಸಚಿವನಾಗಿದ್ದೇನೆ ಎಂದರು. ನಿಮ್ಮ ಪ್ರೀತಿಗೆ ಅಭಿನಂದನೆಗಳು ಎಂದರು. ದೇಶದಲ್ಲಿ ಕಾಂಗ್ರೇಸ್ 66 ವರ್ಷ ಆಡಳಿತ ನಡೆಸಿದೆ. ಇದರಲ್ಲಿ ದೇಶ ವಿದೇಶಗಳಲ್ಲಿ ಎಷ್ಟು ಅಭಿವೃದ್ದಿ ಹೊಂದಿದೆ ಎಂದು ಪ್ರಶ್ನೆ ಮಾಡಿದರು. ಅದೇ 7 ವರ್ಷ ಮೋದಿ ಆಡಳಿತದಲ್ಲಿ ದೇಶ ಎಷ್ಟು ಅಭಿವೃದ್ಧಿ ಕಂಡಿದೆ ಗಮನಿಸಿ ಎಂದರು.

ಸದನದಲ್ಲಿ ಸ್ಪೀಕರ್ ಬಂದಾಕ್ಷಣ ಎಲ್ಲಾರೂ ಗೌರವ ನೀಡುತ್ತಾರೆ. ಅಂತಹ ಸ್ಪೀಕರ್ ಮುಖಕ್ಕೆ ವಿರೋಧ ಪಕ್ಷದವರು ಪೇಪರ್ ಎಸೆಯುತ್ತಾರೆ. 10 ಲಕ್ಷ ಮತ ಪಡೆದ ಸಂಸದ ಸದನದಲ್ಲಿ ಟೇಬಲ್ ಮೇಲೆ ನಿಂತು ಡ್ಯಾನ್ಸ್ ಮಾಡುತ್ತಾರೆ ಎಂದರೆ ಎಂತಹ ಸಂಸ್ಕೃತಿಯನ್ನು ಕಾಂಗ್ರೇಸ್ ತರಲು ಹೊರಟಿದೆ ಎಂಬುದು ತಿಳಿಯುತ್ತದೆ ಎನ್ನುವ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ನವರು 2 ಭಾರಿ ಸೋಲಿಸಿದರು. ಬಿಜೆಪಿ ಸರ್ಕಾರ ದಲಿತರ ಮೀಸಲಾತಿ ತೆಗೆಯಲಿದೆ ಎಂಬುದನ್ನು ಕಾಂಗ್ರೇಸ್ ಬಿಂಬಿಸುತ್ತಿದೆ. ಆದರೆ ಜನರಿಗೂ ಬುದ್ದಿ ಇದೆ ಎಂಬುದನ್ನು ಕಾಂಗ್ರೆಸ್ ತಿಳಿದುಕೊಳ್ಳಲಿ ಎಂದು ಹೇಳಿದರು. ಬಿಜೆಪಿ ಯಾವುದೇ ಕಾರಣಕ್ಕೂ ಸಂವಿಧಾನವನ್ನು ಮುಟ್ಟುವುದಿಲ್ಲ.

ನಿನ್ನೆ ಸಿಎಂ ಭೇಟಿ ಮಾಡಿದ್ದೇವೆ. ಚಿತ್ರದುರ್ಗ ಜಿಲ್ಲೆಗೆ ವೈದ್ಯಕೀಯ ಕಾಲೇಜಿಗೆ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.ರೈಲ್ವೆ ಯೋಜನೆಗೆ ಹಣ ಮಂಜೂರು ಮಾಡಿಸಿದ್ದೇವೆ. ಸಿಎಂ ಅವರಿಂದಲೂ ಹಣ ಬಿಡುಗಡೆ ಮಾಡಿಸುತ್ತೇನೆ.ತ್ಯಾಗ, ಸಂಸ್ಕಾರವನ್ನು ಆರ್ ಎಸ್ ಎಸ್ ನಿಂದ ಕಲಿತಿದ್ದು, ನನಗೂ ಬ್ರಾಂಡ್ ಇದೆ. ಶಾಸಕ, ಸಚಿವನಾಗಿ ಕೆಲಸ ಮಾಡುವಾಗ ಯಾರಿಂದಲೂ ಲಂಚ ಪಡೆದಿಲ್ಲ ಅದೇ ನನ್ನ ಬ್ರಾಂಡ್ ಎಂದು ತಿಳಿಸಿದರು. ಇದಕ್ಕೂ ಮೊದಲು ನಿನ್ನೆ ರಾತ್ರಿ ಹಿರಿಯೂರು ಆಗಮಿಸಿದ ಸಚಿವರು ವಿವಿ ಸಾಗರ ಪ್ರವಾಸಿ ಮಂದಿರದಲ್ಲಿ ತಂಗಿದ್ದರು. ಬೆಳಿಗ್ಗೆ ಹಿರಿಯೂರು ನಗರಕ್ಕೆ ಬಂದರು. ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ನಗರದ ದಕ್ಷಿಣ ಕಾಶಿ ಶ್ರೀ ತೇರುಮಲ್ಲೆಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ನಂತರ ಮೆರವಣಿಗೆ ಮೂಲಕ ನಗರದ ಟಿಬಿ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚಿತ್ರದುರ್ಗ ಪ್ರವೇಶಿಸಿದರು.

ಮೊಳಗಿದ ಡಿಜಿ ಸೌಂಡ್ : ಸಚಿವ ಜನಾರ್ಶಿವಾದ ಯಾತ್ರೆ ಕಾರ್ಯಕ್ರಮದಲ್ಲಿ ಡಿಜೆ ಸೌಂಡ್ ಮೊಳಗಿತು. ವಿವಿಧ ಕಾಲಾ ತಂಡಗಳೊಂದಿಗೆ, ವಾದ್ಯಗೋಷ್ಠಿಗೆ ಕಾರ್ಯಕರ್ತರು ಕುಳಿದು ಕುಪ್ಪಳಿಸಿದರು. ಕೇಂದ್ರ ಸಚಿವರಿಗೆ ಕಾರ್ಯಕರ್ತರು ಜೈಕಾರ ಹಾಕಿದರು. ಸಚಿವರ ಕೊರೋನಾ ನಿಯಮಗಳನ್ನು ಉಲ್ಲಂಘಿಸಿದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು, ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್, ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ ಶೇಖರ್ ಅವರು ಗೈರಾಗಿದ್ದರು. ಹೊಳಲ್ಕೆರೆ ಶಾಸಕ ಚಂದ್ರಪ್ಪ, ವೈ. ಎ. ನಾರಾಯಣಸ್ವಾಮಿ, ಕೆ.ಎಸ್ ನವೀನ್, ಜಿಲ್ಲಾಧ್ಯಕ್ಷ ಮುರುಳಿ, ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Edited By : Nagesh Gaonkar
PublicNext

PublicNext

18/08/2021 05:25 pm

Cinque Terre

47.18 K

Cinque Terre

3

ಸಂಬಂಧಿತ ಸುದ್ದಿ