ಹೈದರಾಬಾದ್: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ, ಸೇರಿದಂತೆ ಕಾಂಗ್ರೆಸ್‌ನ ಕೆಲ ಮುಖಂಡರ ಟ್ವಿಟರ್ ಖಾತೆ ಸ್ಥಗಿತಗೊಂಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಕಾಂಗ್ರೆಸ್‌ನ ಯುವ ಕಾರ್ಯಕರ್ತರು ಟ್ವಿಟರ್ ಇಂಡಿಯಾ ವಿರುದ್ಧ ಅಮಾನವೀಯ ಪ್ರತಿಭಟನೆ ಮಾಡಿ ವಿಕೃತಿ ಮೆರೆದಿದ್ದಾರೆ.
ಆಂಧ್ರ ಪ್ರದೇಶ ಮಾಜಿ ಸಂಸದ ಜಿ.ವಿ ಹರ್ಷ ಕುಮಾರ್ ಪುತ್ರ ಜಿ.ವಿ ಶ್ರೀರಾಜ್ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಸಲಾಗಿದೆ. ಟ್ವಿಟರ್ ಬರ್ಡ್ ಎಂದು ತೋರಿಸಿ ಒಂದು ಪುಟ್ಟ ಪಕ್ಷಿಯನ್ನು ಕುದಿಯುತ್ತಿದ್ದ ಎಣ್ಣೆಗೆ ಹಾಕಿ ಡ್ರೀಪ್ ಫ್ರೈ ಮಾಡಿದ್ದಾರೆ. ಬಳಿಕ ಟ್ವಿಟರ್ ಬರ್ಡ್ಅನ್ನು ಪಾರ್ಸಲ್ ಮಾಡಿ, ಗುರುಗ್ರಾಮ ಹಾಗೂ ದೆಹಲಿಯಲ್ಲಿರುವ ಟ್ವಿಟರ್ ಸಂಸ್ಥೆಯ ಕಚೇರಿಗೆ ಕಳುಹಿಸುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೆಹಲಿಯ ಅತ್ಯಾಚಾರ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಸಂತ್ವಾನ ಹೇಳಿದ್ದ ರಾಹುಲ್ ಗಾಂಧಿ ಕುಟುಂಬಸ್ಥರೊಂದಿಗೆ ಇದ್ದ ಫೋಟೋಗಳನ್ನು ಟ್ವೀಟ್ ಮಾಡಿದ್ದರು. ಸಂತ್ರಸ್ತ ಕುಟುಂಬಸ್ಥರ ಗುರುತು ರಿವೀಲ್ ಮಾಡಿದ್ದ ಕಾರಣ ಟ್ವಿಟರ್ ಇಂಡಿಯಾ ಅವರ ಖಾತೆಯನ್ನು ಸ್ಥಗಿತಗೊಳಿಸಿತ್ತು. ಅಲ್ಲದೇ ರಾಹುಲ್ ಗಾಂಧಿ ಅವರ ಮಾಡಿದ್ದ ಟ್ವೀಟ್ಗಳನ್ನು ಡಿಲೀಟ್ ಮಾಡಿತ್ತು.
PublicNext
18/08/2021 03:41 pm