ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಹಿರಿಯೂರಿನಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರಿಗೆ ಅದ್ದೂರಿ ಸ್ವಾಗತ..

ಚಿತ್ರದುರ್ಗ: ಕೆಂದ್ರ ಸಮಾಜಿಕ ಮತ್ತು ಯುವ ಸಬಲೀಕರಣ ಸಚಿವರಾದ ಎ. ನಾರಾಯಣಸ್ವಾಮಿ ಅವರ ಜನಾಶೀರ್ವಾದ ಯಾತ್ರೆ ಹಿರಿಯೂರು ತಲುಪಿದ್ದು, ಸಚಿವರನ್ನು ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು. ಸಚಿವ ನಾರಾಯಣಸ್ವಾಮಿ ದಕ್ಷಿಣ ಕಾಶಿಯ ತೇರುಮಲ್ಲೇಶ್ವರನ ಆಶೀರ್ವಾದ ಪಡೆದರು.

ನಂತರ ಅವರನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಕರೆ ತರಲಾಗುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಸಮಾಜದ ಮುಖಂಡರು ಅಭಿಮಾನಿಗಳು, ಹಾಗೂ ಬಿಜೆಪಿ‌ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ಸಚಿವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವರು ನಂತರ ಐಮಂಗಲದಲ್ಲಿ‌ಆಹಾರ ಕಿಟ್ ಗಳ ವಿತರಣೆ ಕಾರ್ಯಕ್ರಮದಲ್ಲಿ‌ ಭಾಗವಹಿಸಿ ಚಿತ್ರದುರ್ಗದ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ.

Edited By : Shivu K
PublicNext

PublicNext

18/08/2021 01:45 pm

Cinque Terre

37.93 K

Cinque Terre

2

ಸಂಬಂಧಿತ ಸುದ್ದಿ