ನವದೆಹಲಿ: ದೇಶದಲ್ಲಿ ಭಾರತೀಯ ಮುಸ್ಲಿಮರು ಆತಂಕದ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎಂದು ಖ್ಯಾತ ಲೇಖಕಿ ಅರುಂಧತಿ ರಾಯ್ ಹಾಗೂ ಶಾರ್ಜೀಲ್ ಉಸ್ಮಾನಿ ಅನೇಕ ಬಾರಿ ಆರೋಪಿಸಿದ್ದಾರೆ. ಇದಕ್ಕೆ ಸ್ವತಃ ಅನೇಕ ಮುಸ್ಲಿಮರೇ ವಿರೋಧ ವ್ಯಕ್ತಪಡಿಸಿದ್ದರು. ಸದ್ಯ ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ಪ್ರಸ್ತಾಪಿಸಿರುವ ರಾಜಕಾರಣಿ ಶೆಹಜಾದ್ ಪೂನಾವಲ್ಲ, ಅರುಂಧತಿ ರಾಯ್ ಹಾಗೂ ಶಾರ್ಜೀಲ್ ಉಸ್ಮಾನಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ಅರುಂಧತಿ ರಾಯ್, ಶಾರ್ಜೀಲ್ ಉಸ್ಮಾನಿ ಅವರು ಭಾರತೀಯ ಮುಸ್ಲಿಮರು 'ನರಮೇಧದ ವಾತಾವರಣ'ದಲ್ಲಿ ಇದ್ದಾರೆ ಎಂದು ಹೇಳಬಹುದು. ದಯವಿಟ್ಟು ಅವರಿಗೆ ಈ ವಿಡಿಯೋ ತೋರಿಸಿ. ತಾಲಿಬಾನಿಗಳ ಅಟ್ಟಹಾಸದಿಂದ ಜನ ಕಂಗೆಟ್ಟು ಅಫ್ಘಾನಿಸ್ತಾನದಿಂದ ಪಲಾಯನ ಮಾಡುತ್ತಿದ್ದಾರೆ. ಇದು "ನರಮೇಧದ ವಾತಾವರಣ". ಇಂತಹ ಘೋರ ಕೃತ್ಯದಿಂದ ದೂರವಿದ್ದು, ಬದುಕು ನಡೆಸುತ್ತಿರುವ ಭಾರತೀಯ ಮುಸ್ಲಿಮರು ದೇಶದ ಬಗ್ಗೆ ಹೆಮ್ಮೆ ಪಡಬೇಕು" ಎಂದು ಶೆಹಜಾದ್ ಪೂನಾವಲ್ಲ ಟ್ವೀಟ್ ಮಾಡಿದ್ದಾರೆ.
PublicNext
17/08/2021 03:56 pm