ಬೆಂಗಳೂರು: ಜಾರಿ ನಿರ್ದೇಶನಾಲಯ (ಇಡಿ) ದಾಳಿ ಬಳಿಕ ಜಮೀರ್ ಅವರಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದ ಸಿದ್ದರಾಮಯ್ಯ ಇಂದು ಜಮೀರ್ ಮನೆಗೆ ಭೇಟಿ ನೀಡಿ ಸಮಾಧಾನ ಪಡಿಸಿದ್ದಾರೆ. ಗುರು-ಶಿಷ್ಯ ಎಂದು ಗುರುತಿಸಿಕೊಂಡಿರುವ ಮಾಜಿ ಸಚಿವ ಜಮೀರ್ ಅಹಮ್ಮದ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಈಗ ಮತ್ತೆ ಒಂದಾಗಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಮಾಧ್ಯಮಗಳ ಮುಂದೆಯೇ ಜಮೀರ್ ಜತೆ ಫೋನ್ ನಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ.. ‘ಎಲ್ಲಿದಿಯಪ್ಪ ನೀನು, ಆಯ್ತು ಬಾಪ್ಪಾ ಮಾತನಾಡ್ತೇನೆ. ನಾನೇಕೆ ಅನುಮಾನ ಬೀಳಲಿ, ಮನೆಗೆ ಬಾ ಮಾತನಾಡೋಣ ಎಂದಿದ್ದರು. ಈಗ ಇದಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸಲು ತಾವೇ ಖುದ್ದಾಗಿ ಜಮೀರ್ ಮನೆಗೆ ಹೋಗಿದ್ದಾರೆ.
ಇಡಿ ಪ್ರಕರಣದ ಬಗ್ಗೆ ವಕೀಲರ ಜತೆ ಚರ್ಚೆ ಮಾಡು. ಹಿರಿಯ ವಕೀಲರನ್ನ ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೋ..ತಡ ಮಾಡಬೇಡ. ಬಿಜೆಪಿ ಇಡಿ ಬಳಸಿಕೊಂಡು ನಿನ್ನ ಮೇಲೆ ರೇಡ್ ಮಾಡಿಸಿದೆ. ಎಲ್ಲ ದಾಖಲೆ ಸರಿ ಮಾಡಿಕೋ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ನನ್ನ ಮನೆ ಕಟ್ಟಿರುವುದು ಸಹ ಐಎಂಎ ಹಣದಿಂದ ಎಂದು ಅಪಪ್ರಚಾರ ಮಾಡ್ತಿದ್ದಾರೆ. ಇವೆಲ್ಲಾ ಸುಳ್ಳು ಎಂದು ಜಮೀರ್ ದುಃಖತೋಡಿಕೊಂಡಿಕೊಂಡಿದ್ದಾರೆ.
PublicNext
15/08/2021 05:34 pm