ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು 88 ನಿಮಿಷಗಳ ಸುದೀರ್ಘ ಭಾಷಣ ಮಾಡಿದ್ದಾರೆ. ಇಲ್ಲಿಯವರೆಗಿನ ಸ್ವಾತಂತ್ರ್ಯ ದಿನದ ಭಾಷಣಗಳ ಪೈಕಿ ಇದು ಮೂರನೇ ದೀರ್ಘವಾದ ಭಾಷಣವಾಗಿದೆ. ಬೆಳಗ್ಗೆ 7:30ಕ್ಕೆ ಭಾಷಣ ಆರಂಭಿಸಿದ ಪ್ರಧಾನಿ ಮೋದಿ 9 ಗಂಟೆಯ ಹೊತ್ತಿಗೆ ತಮ್ಮ ಮಾತನ್ನು ಮುಗಿಸಿದರು.
2016ರ ಭಾಷಣ ದೀರ್ಘ ಭಾಷಣ ಎಂದು ದಾಖಲಾಗಿದ್ದು, ಒಟ್ಟು 96 ನಿಮಿಷ ಮಾತನಾಡಿದ್ದರು. ಇನ್ನು 2019ರಲ್ಲಿ ಪ್ರಧಾನಿ ಮೋದಿ 92 ನಿಮಿಷಗಳ ಕಾಲ ಭಾಷಣ ಮಾಡಿದ್ದರು. 2017ರ ಭಾಷಣ ಅತಿ ಕಡಿಮೆ ಅವಧಿಯ ಭಾಷಣ ಆಗಿದ್ದು 56 ನಿಮಿಷದಲ್ಲೇ ಮೋದಿ ಮಾತನ್ನು ಕೊನೆಗೊಳಿಸಿದ್ದರು.
ಈ ಹಿಂದೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮೋದಿ ದೀರ್ಘ ಭಾಷಣದ ಬಗ್ಗೆ ಪ್ರಸ್ತಾಪಿಸಿ, ಜನರು ಭಾಷಣದ ಅವಧಿಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಈ ಸಲಹೆಯನ್ನು ಜಾರಿ ಮಾಡಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದರು.
PublicNext
15/08/2021 03:24 pm