ಚಿಕ್ಕಬಳ್ಳಾಪುರ: ಭೂಮಿ, ಕಾಡು ಮತ್ತು ಗೋವುಗಳ ನಡುವೆ ಅವಿನಾಭಾವ ಸಂಬಂಧ ಇದೆ. ಹೀಗಾಗಿ ಗೋವುಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಕ್ಷೇತ್ರದ ಬಳಿಯ ರಾಷ್ಟ್ರೋತ್ಥಾನ ಗೋಶಾಲೆ ಮಾಧವ ಸೃಷ್ಟಿಗೆ ಇಂದು ಯಡಿಯೂರಪ್ಪ ಭೇಟಿ ನೀಡಿದರು. ನಂತರ ಗೋಶಾಲೆಯಲ್ಲಿ ವನಮಹೋತ್ಸವಕ್ಕೆ ಚಾಲನೆ ನೀಡಿದರು.
ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪನವರು, ರಾಷ್ಟ್ರೋತ್ಥಾನ ಗೋ ಶಾಲೆಗೆ ಭೇಟಿ ನೀಡಿ ಸಸಿ ನೆಡುವ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸಂತೋಷವಾಗಿದೆ. ಗೋವುಗಳ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ ನ ಈ ಕಾರ್ಯ ಮೆಚ್ಚುವ ಕೆಲಸ ಎಂದು ಶ್ಲಾಘಿಸಿದರು. ದೇಶಿ ತಳಿಗಳ ಸಂರಕ್ಷಣೆ ಅಭಿವೃದ್ಧಿ ಮಾಡುತ್ತಿರುವ ರಾಷ್ಟ್ರೋತ್ಥಾನ ಗೋ ಶಾಲೆ ಇದರೊಂದಿಗೆ ಕಾಡು, ಗುಡ್ಡಗಾಡು ಮಧ್ಯೆ ಕೃಷಿ ಮಾಡುವ ಕಾಯಕ ಮಾಡುತ್ತಿರುವುದು ಮಾದರಿ ಕಾರ್ಯ ಎಂದು ಅಭಿನಂದಿಸಿದ್ದಾರೆ.
PublicNext
13/08/2021 04:54 pm