ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬೊಮ್ಮಾಯಿ ಬಿಎಸ್ ವೈ ರಬ್ಬರ್ ಸ್ಟಾಂಪ್ ಆಗಲ್ಲ- ಬಸನಗೌಡ ಪಾಟೀಲ್ ಯತ್ನಾಳ

ಹುಬ್ಬಳ್ಳಿ: ಯತ್ನಾಳಗೆ ಅನ್ಯಾಯ ಆದ ಬಗ್ಗೆ ಸ್ವಾಮೀಜಿ ಗಳು‌ ಹೇಳಿಕೆ ಕೊಟ್ಟಿದ್ದಾರೆ. ನನ್ನ ಕಾಡಿಬೇಡಿ. ಟೈಯರ್ ಸುಟ್ಟು ಮಂತ್ರಿ ಆಗುವ ವ್ಯಕ್ತಿ ಅಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ನಮ್ಮ‌ ಬೇಡಿಕೆ ಸಿಎಂ ಬದಲಾವಣೆ ಆಗಬೇಕು ಅಂತಾ ಇತ್ತು, ಈಗ ನಾಯಕತ್ವ ಬದಲಾವಣೆ ಆಗಿದೆ. ಒಬ್ಬ ನಾಯಕ ತನ್ನ ಚಾಪು ಇಟ್ಟುಕೊಳ್ಳಬೇಕು.

ಬೊಮ್ಮಾಯಿ ಬಿಎಸ್ ವೈ ನೆರಳು ಆಗಲ್ಲ. ಅವರಿಗೆ ಸ್ವಲ್ಪ ಟೈಂ ಕೊಡಿ. ಬೊಮ್ಮಾಯಿ ಬಿಎಸ್ ವೈ ರಬ್ಬರ್ ಸ್ಟಾಂಪ್ ಆಗಲ್ಲ. ಹಿಂದು ವಿರೋಧಿ ಸಿಎಂ‌ ಆಗಿದ್ದಾರೆ, ಆ ನೋವು ಕಾರ್ಯಕರ್ತರಲ್ಲೂ ಇದೆ.

ಯಾರು ಹಿಂದೆ ಹೊಡಿಸಿದ್ರು, ಯಾರು ಹೊಡೆತ ತಿಂದರೂ ಅನ್ನೋದು ಎಲ್ಲರಿಗೂ ಗೊತ್ತಿದೆ. ಪಕ್ಷಕ್ಕೆ ಹಾನಿ ಅಗಬಾರದು ಅಂತಾ ಹೈಕಮಾಂಡ್ ನಿರ್ಣಯ ಕೈಗೊಂಡಿದೆ ಎಂದರು. ಹಿಂದೆ ಎಷ್ಟೋ ಜನ ಕಮ್ಯುನಿಸ್ಟ್ ಇದ್ದವರು ಬಿಜೆಪಿಗೆ ಬಂದಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಹೋಗುವ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದರು.

Edited By : Manjunath H D
PublicNext

PublicNext

12/08/2021 04:10 pm

Cinque Terre

120.15 K

Cinque Terre

6

ಸಂಬಂಧಿತ ಸುದ್ದಿ