ನವದೆಹಲಿ : 75ನೇ ಸ್ವಾತಂತ್ರ್ಯ ದಿನಾಚರಣೆಗೆ ದೇಶ ಅಂತಿಮ ಹಂತದ ತಯಾರಿಯಲ್ಲಿದೆ. 75ನೇ ವರ್ಷದ ಅಮೃತಮಹೋತ್ಸವ ಸ್ಮರಣೀಯವಾಗಿಸಲು ಕೇಂದ್ರ ಹಲವು ಕಾರ್ಯಕ್ರಮ ಆಯೋಜಿಸಿದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೂ ಮೊದಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗೆ ಹೊಸ ಕಾರು ಬರಲಿದೆ.
2020ರಲ್ಲಿ ರಾಷ್ಟ್ರಪತಿ ಭವನ ಗರಿಷ್ಠ ಭದ್ರತೆಯ ಮರ್ಸಿಡಿಸ್ ಬೆಂಜ್ ಮೇಬ್ಯಾಚ್ S600 ಪುಲ್ ಮ್ಯಾನ್ ಗಾರ್ಡ್ ಕಾರನ್ನು ಬುಕ್ ಮಾಡಿತ್ತು. ಆದರೆ ಕಳೆದ ವರ್ಷ ಕೊರೊನಾ ಕಾರಣ ರಾಮನಾಥ್ ಕೋವಿಂದ್ ಕಾರು ಖರೀದಿಯನ್ನು ಮುಂದೂಡಿಕೆ ಮಾಡಲು ರಾಷ್ಟ್ರಪತಿ ಭವನಕ್ಕೆ ಸೂಚಿಸಿದ್ದರು. ಆರೋಗ್ಯ ತುರ್ತು ಅಗತ್ಯತೆ ಪೂರೈಸಲು ಕಾರು ಸೇರಿದಂತೆ ಇತರ ಖರೀದಿಗೆ ಕೋವಿಂದ್ ಬ್ರೇಕ್ ಹಾಕಿದ್ದರು.
ಇದೀಗ ಆಗಸ್ಟ್ 15ರೊಳಗೆ ಕಾರು ರಾಷ್ಟ್ರಪತಿ ಭವನ ಸೇರಲಿದೆ. ಸದ್ಯ ರಾಮನಾಥ್ ಕೋವಿಂದ್ ಬಳಕೆ ಮಾಡುತ್ತಿರುವ W221 ಮಾಡೆಲ್ ಮರ್ಸಿಡಿಸ್ ಬೆಂಜ್ ಮೇಬ್ಯಾಚ್ S600 ಪುಲ್ ಮ್ಯಾನ್ ಗಾರ್ಡ್ ಕಾರು. ಕಾರನ್ನು 2011ರಲ್ಲಿ ಖರೀದಿ ಮಾಡಲಾಗಿದೆ. ರಾಮನಾಥ್ ಕೋವಿಂದ್ ನೂತನ ಕಾರು ಸದ್ಯ ಇರುವ ಕಾರಿಗಿಂತ 6 ಮೀಟರ್ ಉದ್ದವಾಗಿದೆ. ಈ ಕಾರು ನಿರ್ಮಾಣಕ್ಕೆ 1.5 ರಿಂದ 2 ವರ್ಷ ತೆಗೆದುಕೊಂಡಿದೆ. ಪ್ರತಿಯೊಂದು ಫೀಚರ್ಸ್, ಭದ್ರತೆಯನ್ನು ಹಲವು ಸ್ತರದಲ್ಲಿ ಪರೀಕ್ಷೆಗೆ ಒಳಪಡಿಸಿ ಈ ಕಾರು ನಿರ್ಮಿಸಲಾಗಿದೆ. ಈ ಕಾರು ಎಕೆ 47 ರೈಫಲ್ ದಾಳಿಯನ್ನು ತಡೆಯಬಲ್ಲ ಶಕ್ತಿ ಹೊಂದಿದೆ.
PublicNext
09/08/2021 06:35 pm