ಚಿತ್ರದುರ್ಗ : ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಖಾತೆ ಹಂಚಿಕೆ ವಿಚಾರದಲ್ಲಿ ನನಗೆ ಸಮಾಧಾನವೂ ಇಲ್ಲ, ಅಸಮಾಧಾನವೂ ಇಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು. ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ನಾಯಕರಾದ ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಜೊತೆಯಲ್ಲಿ ಕೆಲಸ ಮಾಡ್ತಿರುವುದೇ ಸಂತೋಷ, ಸಮಾಧಾನ ವಿಚಾರವಾಗಿದೆ ಎಂದರು. ಯಾವುದೇ ವಿಚಾರ ಬಂದಾಗ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.ನಾನು ಕೆಲವೊಮ್ಮೆ ಜನರ ಸೇವೆಗಾಗಿ ನಾನು 30 ವರ್ಷದಿಂದ ಜನಸೇವೆಗೆ ಬದುಕಿದ್ದೇನೆ ಎಂದು ಹೇಳಿದರು.
ನಾನು ಮುಂಚೆಯಿಂದ ಜನಸೇವೆಗೆ ಖಾತೆ ಪ್ರಶ್ನೆ ಇಲ್ಲ, ಸರ್ಕಾರದಲ್ಲಿ ಕೆಲಸ ಮಾಡುವ ಸಮಾಧಾನ ಇದೆ.ನಮ್ಮ ಭಾರತಿಯ ಜನತಾ ಪಾರ್ಟಿಯಲ್ಲಿ ಪ್ರಕ್ರಿಯೆ ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ಆಗಬೇಕು, ತದನಂತರ ಸಂಪುಟದಲ್ಲಿ ಬಹಳಷ್ಟು ಮಂದಿ ಮಂತ್ರಿ ಬದಲಾವಣೆ ಮಾಡಬೇಕು.ಯಾರು ಯಾರಿಗೆ ಜವಾಬ್ದಾರಿ ಕೊಡಬೇಕು ಎನ್ನುವ ತಿರ್ಮಾನ ತೆಗೆದುಕೊಂಡಾಗ ಅಸಮಾಧಾನ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಅಸಮಾಧಾನ ಇರುವುದಿಲ್ಲ. 2023 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರದಂತೆ ಕೆಲಸ ಮಾಡುವುದೇ ನಮ್ಮ ಗುರಿ ಎಂದು ತಿಳಿಸಿದರು. ಸತ್ಯ ಹರಿಶ್ಚಂದ್ರ ಅರಮನೆಯಲ್ಲಿ, ಸ್ಮಶಾನದಲ್ಲಿ ಸೈ ಎನಿಸಿಕೊಂಡಿದ್ದನು. ನಾನು ಸತ್ಯ ಹರಿಶ್ಚಂದ್ರ ನಂತೆ ಕಾಯಾ, ವಾಚ, ಮನಸ್ಸಿನಿಂದ ಕೆಲಸ ಮಾಡುತ್ತೇವೆ ಅಲ್ಲಿಯೂ ಸೈ ಎನಿಸಿಕೊಂಡಿದ್ದೇನೆ, ಇಲ್ಲಿ ಸ್ಮಶಾನದಲ್ಲಿ(ಸಾರಿಗೆ ಇಲಾಖೆ) ಕೆಲಸ ಮಾಡುತ್ತೇನೆ. ನಾನು ಇವತ್ತು ಸಾರಿಗೆ ಇಲಾಖೆಯಲ್ಲಿ ಕೆಲವೊಂದು ಸವಾಲುಗಳು ಇದ್ದಾವೆ. ಸಾರಿಗೆ ಇಲಾಖೆ ತುಂಭಾ ನಷ್ಟದಲ್ಲಿ ಇದೆ ಎಂದು ಎಲ್ಲರಿಗೂ ಗೊತ್ತಿದೆ ಎಂದರು.
ಸಾರಿಗೆ ಇಲಾಖೆಯನ್ನು ಲಾಭದಾಯಕವಾಗಿ ತೆಗೆದುಕೊಂಡು ಹೋಗುತ್ತೇನೆ ಎನ್ನುವ ಮೂಲಕ ಸಾರಿಗೆ ಇಲಾಖೆ ಕುರಿತು ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು. ರಾಜಕೀಯ ಜೀವನದಲ್ಲಿ ತುಂಭಾ ಸವಾಲುಗಳು ಬಂದಿವೆ. ಇದನ್ನ ಕೂಡಾ ಸವಾಲಾಗಿ ಸ್ವೀಕರಿಸಿ, ಮುಂದೆ ಇಲಾಖೆಯನ್ನ ಲಾಭದಾಯಕವಾಗಿ ಮಾಡುತ್ತೇನೆ ಎಂದರು. ನನಗೆ ರಾಜಕಾರಣದಲ್ಲಿ ಯಾವುದೇ ಸವಾಲು ಬಂದರು ಸ್ವೀಕರಿಸುತ್ತೇನೆ.ನಮಗೆ ಪಕ್ಷ ಮುಖ್ಯ ನಮ್ಮ ನಾಯಕರಾದ ಪ್ರಧಾನಿ ಮೋದಿ ಜೊತೆಗೆ ಕೆಲಸ ಮಾಡುವುದು ಸಮಾಧಾನ ಎಂದರು.
ನಾಳೆ ಸಾರಿಗೆ ಇಲಾಖೆಯಿಂದ ಜನರಿಗೆ ಹೊರೆಯಾಗದಂತೆ ನೋಡುವೆ.ನಾಳೆ ಅಧಿಕಾರಿಗಳ ಸಭೆಯನ್ನ ಕರೆದಿದ್ದೇನೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗುವುದು.ಯಾವುದೇ ರೀತಿಯಲ್ಲಿ ಸಾರಿಗೆ ಇಲಾಖೆಯಿಂದ ಜನರಿಗೆ ತೊಂದರೆ ಮಾಡಲ್ಲ.ಸಿದ್ದರಾಮಯ್ಯ ಅವರು ರಾಷ್ಟ್ರೀಯ ಪಕ್ಷದಲ್ಲಿ ಕೆಲಸ ಮಾಡುತ್ತಾರೆ.ಅವರಿಗೆ ಸ್ಥಾನ ಬಂದಾಗ ಸಮಾಧಾನದಿಂದ ಕೆಲಸ ಮಾಡಿದ್ದಾರೆ. ನಮ್ಮ ಪಕ್ಷದಲ್ಲಿ ಇದೆಲ್ಲವೂ ಒಂದು ಪ್ರಕ್ರಿಯೆ.ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಸಚಿವರು ತಿಳಿಸಿದರು.
ಇದಕ್ಕೂ ಮೊದಲು ಕೊವೀಡ್ ಕುರಿತು ಪ್ರಗತಿ ಪರಿಶೀಲನೆ ಸಭೆಗೆ ನಡೆಸಿದರು.ಮಹಾಮಾರಿ ಕೊರೊನಾ ಮೂರನೇ ಅಲೆಯ ಸವಾಲು ನಮ್ಮ ಮುಂದೆ ಇದೆ. ಆಗಾಗಿ ಸಿಎಂ ಕೂಡ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಯಾವ ರೀತಿಯಲ್ಲಿ ಮೂರನೇ ಅಲೆ ಎದುರಿಸಬೇಕು ಎಂಬುದನ್ನು ಸಿದ್ದತೆ ಮಾಡಿಕೊಳ್ಳುಲಾಗುತ್ತದೆ. ಮಕ್ಕಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದಂತೆ ನೋಡಿಕೊಳ್ಳಲು ತಯಾರಿ ಮಾಡಿಕೊಳ್ಳಲಾಗಿದೆ ಎಂದರು. ನಮ್ಮ ಜಿಲ್ಲೆಯ ಸಾಕಷ್ಟು ಜನ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಯಾರು ಲಸಿಕೆ ಹಾಕಿಸಿಕೊಂಡಿಲ್ಲ ಅಂತವರು ಲಸಿಕೆ ಹಾಕಿಸಿಕೊಳ್ಳಬೇಕು ಎಂದರು. ಲಸಿಕೆ ಬಗ್ಗೆ ಹಳ್ಳಿ ಕಡೆ ಗೊಂದಲ ಇದ್ದು ಅದನ್ನು ಜಾಗೃತಿ ಮೂಡಿಸುವ ಮೂಲಕ ಎಲ್ಲರಿಗೂ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮನ ಪರಿಕಲ್ಪನೆ ಮಾಡಲಾಗುವುದು ಎಂದು ತಿಳಿಸಿದರು. ಇನ್ನು ನೆರೆ ಹಾವಳಿ ಕುರಿತು ಮುಂಜಾಗ್ರತೆ ಸವಾಲು ಇದೆ. ಜನ ಜಾನುವಾರು ರಕ್ಷಣೆ ಕುರಿತು ಚರ್ಚೆ ನಡೆಯುತ್ತದೆ. ರೈತರ ಬೆಳೆ ಹಾನಿ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು
PublicNext
09/08/2021 04:14 pm