ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧಕ್ಕೆ ಒಂದು ರೂಪವನ್ನು ಕೊಟ್ಟೇ ಕೊಡುತ್ತೇನೆ. ಕೆಲವೊಂದು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ತೀರ್ಮಾನಿಸಿದ್ದೇನೆ"ರವಿವಾರ ಸಂಜೆ ಬೆಂಗಳೂರಿನ ಆರ್.ಟಿ.ನಗರ ನಿವಾಸದಲ್ಲಿ ತಮ್ಮನ್ನು ಭೆಟ್ಟಿಯಾದ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ನಿಯೋಗಕ್ಕೆ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಈ ಭರವಸೆ ನೀಡಿದ್ದಾರೆ.
ಗಡಿ ಅಭಿವೃದ್ಧಿ ಪ್ರಾಧಿಕಾರ,ಗಡಿ ಸಂರಕ್ಷಣಾ ಆಯೋಗ,ಸುವರ್ಣ ಸೌಧಕ್ಕೆ ಪ್ರಮುಖ ಕಚೇರಿಗಳ ಸ್ಥಳಾಂತರ ಹಾಗೂ ಮುಂಬಯಿ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ಮರು ನಾಮಕರಣ ಮಾಡುವ ಕುರಿತು ಈ ವೇಳೆ ನಿಯೋಗವು ಬೊಮ್ಮಾಯಿ ಅವರೊಂದಿಗೆ ಚರ್ಚೆ ಮಾಡಿತು.
2006 ರ ಫೆಬ್ರುವರಿ 16 ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ 2014 ರ ಅಕ್ಟೋಬರ 14 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಸೌಧದಲ್ಲಿ ನಾಡು,ನುಡಿ ಹಾಗೂ ಗಡಿಗೆ ಸಂಬಂಧಿಸಿದಂತೆ ಕನ್ನಡ ಪರ ಹೋರಾಟಗಾರರ,ಚಿಂತಕರ ಸಭೆ ಕರೆದಿದ್ದರು.
ತಾವೂ ಸಹ ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂಥ ಸಭೆಯನ್ನು ಕರೆಯಬೇಕೆಂದು ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಬೊಮ್ಮಾಯಿ ಅವರನ್ನು ಆಗ್ರಹಿಸಿದರು. ಹಾಗೂ ಮುಂದಿನ ಅಕ್ಟೋಬರ 23ರ ಕಿತ್ತೂರು ಚೆನ್ನಮ್ಮ ರಾಣಿಯ ವಿಜಯೋತ್ಸವದ ಮುನ್ನವೇ ಮುಂಬಯಿ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಬೇಕೆಂದು ಅಶೋಕ ಚಂದರಗಿ ಮನವಿ ಮಾಡಿದರು.
ಇದೆ ವೇಳೆ ಉತ್ತರ ಕರ್ನಾಟಕದ ಗಡಿ, ನೆಲ, ಜಲ ಭಾಷೆ ಸೇರಿದಂತೆ ಅಭಿವೃದ್ದಿಯ ದಿಸೆಗೆ ಬೇಕಾದ ಚರ್ಚೆಗಳನ್ನು ಮುಖ್ಯಮಂತ್ರಿಗಳೊಂದಿಗೆ ಚೆರ್ಚೆ ಮಾಡಲಾಯಿತು. ನಿಯೋಗದಲ್ಲಿ ಮೈನೋದ್ದೀನ್ಮ ಕಾನದಾರ,ಶಿವಪ್ಪ ಶಮರಂತ,ಹರೀಶ ಕರಿಗೊನ್ನವರ,ವಿರೇಂದ್ರ ಗೋಬರಿ ಇದ್ದರು.
PublicNext
09/08/2021 12:43 pm