ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನೂತನ ಸಚಿವ ಸಂಪುಟದಲ್ಲಿ ಹಿರಿಯರಿಗೂ ಸ್ಥಾನ ಮಾನ ನೀಡಿದೆ- ಮಾಜಿ ಸಿಎಂ ಶೆಟ್ಟರ್

ಹುಬ್ಬಳ್ಳಿ: ಪಕ್ಷದಲ್ಲಿ ಹಿರಿಯ ನಾಯಕರಿಗೆ ಕಡೆಗಣನೆ ಮಾಡಿಲ್ಲ. ಹಿರಿಯರಿಗೂ ಸ್ಥಾನಮಾನ ನೀಡಿದ್ದಾರೆ. ಈಗಾಗಲೇ ಬಿ.ಎಸ್.ಯಡಿಯೂರಪ್ಪ ಅವರು ಜನಪರವಾದ ಆಡಳಿತ ನೀಡಿದ್ದಾರೆ. ಅದರ ಅಡಿಯಲ್ಲಿ ಬಸವರಾಜ ಬೊಮ್ಮಾಯಿ ಕೆಲಸ ಮಾಡಲಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಸಚಿವ ಸಂಪುಟದಲ್ಲಿ ಹಿರಿಯರಿಗೂ ಸ್ಥಾನ ಮಾನ ನೀಡಲಾಗಿದೆ. ಆರ್.ಅಶೋಕ್, ಈಶ್ವರಪ್ಪ ಸೇರಿದಂತೆ ಹಲವರಿಗೆ ಸ್ಥಾನ ನೀಡಿದೆ. ಯಡಿಯೂರಪ್ಪ ಅವರು ಈವರೆಗೂ ಜನಪರವಾದ ಆಡಳಿತ ನೀಡಿದ್ದಾರೆ. ಅದರ ಅಡಿಯಲ್ಲಿ ಬಸವರಾಜ ಬೊಮ್ಮಾಯಿ ಕೆಲಸ ಮಾಡಲಿದ್ದಾರೆ. ಬಿಜೆಪಿ ಗೆ ತನ್ನದೇ ಆದಂತಹ ತತ್ವ ಸಿದ್ಧಾಂತವಿದೆ ಅದರ ಅಡಿಯಲ್ಲಿ ಬೊಮ್ಮಾಯಿ ಅವರು ಕೆಲಸ ಮಾಡಲಿ. ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ದಿ ಮಾಡಲಿ, ರಾಜ್ಯದಲ್ಲಿ ಅಪೂರ್ಣವಾದಂತಹ ಕೆಲಸಗಳನ್ನ ಮುಂದುವರೆಸಲು ನಿರ್ದೇಶನಗಳನ್ನ ನೀಡುತ್ತೇನೆ, ಮುಂದಿನ‌ ಚುನಾವಣೆಯಲ್ಲಿ ಪಕ್ಷ ನೀಡಿದ ಜವಾಬ್ದಾರಿಗಳನ್ನ ನಿಭಾಯಿಸುತ್ತೇನೆ ಎಂದರು.

ನೂತನ ಸಚಿವರಾದ ಮುರಗೇಶ ನಿರಾಣಿ ಹಾಗೂ ಶಂಕರಪಾಟೀಲ ಮುನೇನಕೊಪ್ಪ ಸಚಿವರಾದ ನಂತರ ಪ್ರಥಮ ಬಾರಿಗೆ ಹುಬ್ಬಳ್ಳಿಗೆ ಬಂದಿದ್ದಾರೆ ಹೀಗಾಗಿ ಅವರಿಗೆ ಅಭಿನಂದನೆ ಸಲ್ಲಿಸಲಾಗಿದೆ ಎಂದ ಅವರು, ಶಾಸಕ ಅರವಿಂದ ಬೆಲ್ಲದ ಅಸಮಾಧಾನದ ಹೇಳಿಕೆ ನೀಡುತ್ತಿರೋ ಹಿನ್ನೆಲೆ ಈ‌ ಬಗ್ಗೆ ನಾನು ಯಾವುದೇ ಚರ್ಚೆ ಮಾಡಲ್ಲ ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದು ಬೆಲ್ಲದ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿದರು.

Edited By : Manjunath H D
PublicNext

PublicNext

07/08/2021 01:09 pm

Cinque Terre

94.07 K

Cinque Terre

1

ಸಂಬಂಧಿತ ಸುದ್ದಿ