ನವದೆಹಲಿ: ನಮ್ಮ ಪಕ್ಷದ ಶಾಸಕ ಜಮೀರ್ ಅಹ್ಮದ್ ಮೇಲೆ ಇ.ಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದಾಳಿ ಮಾಡುತ್ತಿರುವುದು ಖಂಡನೀಯ. ಆದರೆ ಇದನ್ನು ಕಾನೂನು ಪ್ರಕಾರ ಎದುರಿಸಲು ಅವರು ಸಮರ್ಥರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಜಮೀರ್ ಅವರು ಈ ಹಿಂದೆ ಎರಡು ವರ್ಷಗಳ ಹಿಂದೆಯೇ ಎಲ್ಲಾ ದಾಖಲೆ ನೀಡಿದ್ದರು. ಈಗ ದಾಳಿ ಅವಶ್ಯಕತೆ ಇಲ್ಲ ಎನಿಸುತ್ತಿದೆ. ಇ.ಡಿ ಹಾಗೂ ಐ.ಟಿ ದಾಳಿ ನಡೆಸುವ ಮೂಲಕ ಕಿರುಕುಳ ನೀಡಲಾಗುತ್ತಿದೆ. ನನಗೂ ಈ ಕಿರುಕುಳ ಹೇಗಿರುತ್ತದೆ ಎಂಬುವುದು ಗೊತ್ತಿದೆ. ಶಾಸಕ ಶ್ರೀನಿವಾಸ್ ಅವರು ಹಣದ ಬಗ್ಗೆ ವಿಧಾನಸೌಧದಲ್ಲೇ ಹೇಳಿದ್ರು, ಆಗ ಇ.ಡಿ, ಎಸಿಬಿ, ಐಟಿ ಎಲ್ಲಿ ಹೋಗಿತ್ತು. ರಮೇಶ್ ಜಾರಕಿಹೊಳಿ ಮನೆ ಮಾರಾಟ ಮಾಡಿ ಸರ್ಕಾರ ರಚನೆ ಮಾಡಿದರು ಅಂತ ಬಹಿರಂಗವಾಗಿ ಹೇಳಿದ್ರು. ಆಗ ಇಡಿ ಎಲ್ಲೋಗಿತ್ತು ಎಂದು ಪ್ರಶ್ನಿಸಿದರು.
ಅಧಿಕಾರ ಇದೇ ಅಂತ ದುರುಪಯೋಗ ಮಾಡಿಕೊಳ್ಳಬಾರದು. ಕಾಂಗ್ರೆಸ್ ಅವರ ಮನೆಮೇಲೆ ನಡಿತಿದೆಯಲ್ಲ, ಬಿಜೆಪಿಯವರೆಲ್ಲ ಪರಿಶುದ್ಧರಾ? ನನ್ನ ಹತ್ತಿರನೂ ಬಂದು ಜಮೀರ್ ಹೇಳಿದ್ರು, ಒಬ್ಬರಿಗೊಂದು ನ್ಯಾಯ ಮತ್ತೊಬ್ಬರಿಗೊಂದು ನ್ಯಾಯನಾ? ನಾನು ಅನುಭವಿಸುತ್ತಿರೋದ್ರಿಂದ ಕಾನೂನು ಮತ್ತು ಅದರ ಚೌಕಟ್ಟಿನ ಬಗ್ಗೆ ನಾನು ಮಾತನಾಡೋದಿಲ್ಲ ಎಂದರು.
ಇದೇ ವೇಳೆ ಭ್ರಷ್ಟಾಚಾರ ಆರೋಪ ಕೇಳಿ ಬಂದ ಮೇಲೂ ಶಶಿಕಲಾ ಜೊಲ್ಲೆ ಅವರಿಗೆ ಸಚಿವ ನೀಡಿರುವ ಬಿಜೆಪಿ ವಿರುದ್ಧ ಕಿಡಿಕಾರಿದ ಡಿಕೆಎಸ್, ನಮ್ಮ ಹೋರಾಟ ಏನ್ ಹೋರಾಟ ಮಾಡಬೇಕು ಅದನ್ನ ಮಾಡುತ್ತೇವೆ ಎಂದರು.
PublicNext
05/08/2021 01:22 pm