ಬೆಂಗಳೂರು: ಬಿಜಿಪಿಗೆ ಒಂಚೂರೂ ಸಭ್ಯತೆ ಇಲ್ಲ. ನೈತಿಕತೆ ಕಳೆದುಕೊಂಡಿದ್ದನ್ನು ಬಿಜೆಪಿ ಪದೇ ಪದೇ ಪ್ರದರ್ಶಿಸುತ್ತಲೇ ಇದೆ. ಅವರು ಚಾರಿತ್ರ್ಯ ವಧೆಯನ್ನು ಹೆಚ್ಚಾಗಿ ಇಷ್ಟಪಡುತ್ತಾರೆ ಎಂದು ಎಐಸಿಸಿ ಸದಸ್ಯೆ ಲಾವಣ್ಯ ಬಲ್ಲಾಳ್ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಸಿದ್ದರಾಮಯ್ಯ ಅವರ ಪುತ್ರನಿಗೆ ವಿಪರೀತ ಕುಡಿಯುವ ಅಭ್ಯಾಸ ಇತ್ತು ಎಂದು ಬಿಜೆಪಿ ಮಾಡಿದ್ದ ಟ್ವೀಟ್ ಪ್ರತಿಕ್ರಿಯೆಯಾಗಿ ಲಾವಣ್ಯ ಬಲ್ಲಾಳ್ ಈ ರೀತಿ ಹೇಳಿದ್ದಾರೆ.
ಬಿಜೆಪಿ ಮಾಡಿದ ಟ್ವೀಟ್ ಏನು?
"ಸಿದ್ದರಾಮಯ್ಯನವರೇ, ನಿಮ್ಮ ಹಿರಿಯ ಪುತ್ರ ರಾಕೇಶ್ ವಿಪರೀತ ಕುಡಿಯುವ ಅಭ್ಯಾಸ ಹೊಂದಿದ್ದರೆಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಕುಡಿದ ಮತ್ತಿನಲ್ಲಿ ಹಿರಿಯರ ಮೇಲೂ ದೌರ್ಜನ್ಯ ಎಸಗಿದ ಬಗ್ಗೆ ಸುದ್ದಿಯಾಗಿತ್ತು. ಇದೆಲ್ಲ ಅಪ್ಪನ ಗುಣ ಎಂದು ಸಾಮಾನ್ಯೀಕರಿಸಲು ಸಾಧ್ಯವೇ?"
ಬಿಜೆಪಿ ಯ ಟ್ವೀಟ್ ಗೆ ಉತ್ತರಿಸಿರುವ ಲಾವಣ್ಯ ಬಲ್ಲಾಳ್, ಅತ್ಯಾಚಾರ ಆರೋಪ,ವಿಧಾನಸೌಧದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ, ಕಾರು ಅಪಘಾತಗಳ ಆರೋಪ ಕೊರೊನಾದಿಂದ ಸರಣಿ ಸಾವುಗಳಿಗೆ ಕಾರಣವಾದ ಬಗ್ಗೆ ಬಿಜೆಪಿಗೆ ಕನಿಕರ ಇಲ್ಲ. ಜನರ ಸಾವಿನ ಪಟ್ಟಿ ಇನ್ನೂ ಬೆಳೆಯುತ್ತಲೇ ಇದೆ ಎಂದಿದ್ದಾರೆ.
PublicNext
31/07/2021 08:40 am