ಬೆಂಗಳೂರು: ಸರ್ಕಾರದ ಭ್ರಷ್ಟಾಚಾರದ ಬಗ್ಗೆ ನಾನು ಹೇಳಲ್ಲ. ಯತ್ನಾಳ್,ವಿಶ್ವನಾಥ್ ಅವರೇ ಹೇಳ್ತಾರೆ. ಯಡಿಯೂರಪ್ಪಗೆ ನಾವು ಹೇಳಿದ್ರೆ ನೋವಾಗುತ್ತೆ. ಆದರೆ ವಿಶ್ವನಾಥ್, ಯತ್ನಾಳ್ ಹೇಳಿದ್ರೆ ನೋವಾಗಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರ ವಿರುದ್ಧ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ಇದ್ರೆ ಹೀನಾಯವಾಗಿ ಸೋಲ್ತೇವೆ ಅಂತ ಮೋದಿ ಅವರನ್ನು ಬದಲಾಯಿಸಿದ್ದಾರೆ. ಆದರೆ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದೇ ಯಡಿಯೂರಪ್ಪ ಎಂದರು.ಇನ್ನು ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಪೂರ್ಣಾವಧಿ ಇರಲಿ ಅಂತ ಹರುಸುತ್ತೇನೆ. ಅಪ್ಪನ ಗುಣ ಮಗನಿಗೆ ಬರುತ್ತೆ ಅಂತೇನಿಲ್ಲ. ಗಾಂಧೀಜಿಯವರ ಪುತ್ರ ಹರಿದಾಸ್ ಕುಡಿತಕ್ಕೊಳಗಾಗಿದ್ದರು , ಬಸವರಾಜ ಬೊಮ್ಮಾಯಿಯೂ ಹಾಗೆಯೇ, ಅಪ್ಪನಿಗಿಂತ ಬುದ್ಧಿವಂತನೂ ಆಗಬಹುದು,ಪೆದ್ದನೂ ಆಗಬಹುದು ಎಂದರು
PublicNext
29/07/2021 10:57 pm