ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹೋದ ಬಾರಿಯ ನೆರೆ ಪರಿಹಾರವೇ ಬಂದಿಲ್ಲ ಈ ಬಾರಿಗೆ ದೇವರೆ ಗತಿ: ಸತೀಶ ಜಾರಕಿಹೊಳಿ

ಹುಬ್ಬಳ್ಳಿ: ಹೋದ ಬಾರಿಗೆ ಆಗಿರುವ ನೆರೆ ಹಾವಳಿಯ ಪರಿಹಾರವೇ ಜನರಿಗೆ ಸಿಕ್ಕಿಲ್ಲ. ಸರ್ಕಾರದ ಆಂತರಿಕ ಕಿತ್ತಾಟದಲ್ಲಿ ಜನರು ಬಲಿಪಶುಗಳಾಗುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಸತೀಶ ಜಾರಕಿಹೊಳಿ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಮಹಿಳಾ ಕಾಂಗ್ರೆಸ್ ಸಮಾರಂಭವೊಂದರಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನೆರೆ ಹಾನಿಯ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ. ಸಿ.ಎಲ್.ಪಿ ಟೀಮ್ ನಿಂದ ಈಗಾಗಲೇ ಎಲ್ಲೆಲ್ಲಿ ಹಾನಿಯಾಗಿದೆಯೋ ಅಲ್ಲಿ ಪರಿಹಾರ ನೀಡುವಂತೆ ಜಿಲ್ಲಾಡಳಿತದ ಗಮನಕ್ಕೆ ತರಲಾಗುತ್ತದೆ ಎಂದು ಅವರು ಹೇಳಿದರು.

ಚುನಾವಣೆಗೆ ಇನ್ನೂ ಕೂಡ ಅಭ್ಯರ್ಥಿಗಳನ್ನು ನಿಶ್ಚಯ ಮಾಡಿಲ್ಲ. ಕಾಂಗ್ರೆಸ್ ಬೇರೆ ಜೆಡಿಎಸ್ ಬೇರೆ ನಮ್ಮ ಕಾರ್ಯವೈಖರಿ ಭಿನ್ನವಾಗಿದೆ‌ ಎಂದ ಅವರು, ಬಿಜೆಪಿಯವರು ಸುಮಾರು ಎರಡು ವರ್ಷಗಳಿಂದ ಕಿತ್ತಾಟ ನಡೆಸುತ್ತಿದ್ದಾರೆ. ಅವರಿಗೆ ಅಧಿಕಾರ ಬೇಕಿದೆ ವಿನಃ ಜನರ ಯೋಗಕ್ಷೇಮ ಬೇಕಿಲ್ಲ ಎಂದು ಅವರು ಹೇಳಿದರು.

Edited By : Manjunath H D
PublicNext

PublicNext

29/07/2021 04:10 pm

Cinque Terre

46.6 K

Cinque Terre

0

ಸಂಬಂಧಿತ ಸುದ್ದಿ