ಹುಬ್ಬಳ್ಳಿ: ರಾಜ್ಯದ ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿ ಹುಬ್ಬಳ್ಳಿಗೆ ಆಗಮಿಸಿದ ಬಸವರಾಜ ಬೊಮ್ಮಾಯಿಯವರು ಸ್ವಪಕ್ಷಿಯರ ಅಸಮಾಧಾನದಿಂದ ತವರು ಜಿಲ್ಲೆಯಲ್ಲಿಯೇ ಏಕಾಂಗಿಯಾಗಿದ್ದಾರೆ.
ಸಿಎಂ ಆದ ಬಳಿಕ ಮೊದಲ ಸಲ ಹುಟ್ಟೂರಿಗೆ ಭೇಟಿ ನೀಡಿದ್ದ ಬೊಮ್ಮಾಯಿ ಆಗಮನದ ವೇಳೆ ಬಿಜೆಪಿ ಮುಖಂಡರು ಬಾರದೇ ಇರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೇ ಸಿಎಂ ಬೊಮ್ಮಾಯಿಯಿಂದ ಇಲ್ಲಿನ ನಾಯಕರು ಅಂತರ ಕಾಯ್ದುಕೊಂಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇನ್ನೂ ಸಿಎಂ ಜೊತೆಗೆ ಧಾರವಾಡ ಗ್ರಾಮೀಣ ಶಾಸಕ ಅಮೃಯಯ ದೇಸಾಯಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಕಾಣಿಸಿಕೊಂಡಿದ್ದಾರೆ. ಆದರೆ ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ, ಕಲಘಟಗಿ ಶಾಸಕ ನಿಂಬಣ್ಣನವರ್, ಜಗದೀಶ್ ಶೆಟ್ಟರ್ , ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ, ಪರಿಷತ್ ಸದಸ್ಯ ಎಸ್.ವಿ.ಸಂಕನೂರು, ಮಾಜಿ ಎಂಎಲ್ ಸಿ ಶಂಕರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ್ ಕುಂದಗೋಳಮಠ ಸೇರಿದಂತೆ ಜಿಲ್ಲೆಯ ಬಹುತೇಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಬೊಮ್ಮಾಯಿಯಿಂದ ದೂರ ಉಳಿದಿದ್ದಾರೆ.
ಬೊಮ್ಮಾಯಿ ಸಿಎಂ ಆಯ್ಕೆ ಆದಾಗಲು ವಿಜಯೋತ್ಸವದಲ್ಲಿ ಬಿಜೆಪಿ ಕಾರ್ಯಕರ್ತರು ಕಾಣಿಸಿಕೊಂಡಿರಲಿಲ್ಲ. ಕೇವಲ ಬೊಮ್ಮಾಯಿ ಅಭಿಮಾನಿಗಳು ಮಾತ್ರ ಸಂಭ್ರಮಾಚರಣೆ ಮಾಡಿದ್ದರು.ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಇಂದು ಹುಬ್ಬಳ್ಳಿಯ ಬೊಮ್ಮಾಯಿ ಅಭಿಮಾನಿಗಳು, ಶಿಗ್ಗಾಂವ - ಸವಣೂರು ಹಾಗೂ ಹಾವೇರಿ ಬಿಜೆಪಿ ಕಾರ್ಯಕರ್ತರಿಂದ ಸಿಎಂ ಸ್ವಾಗತ ಮಾಡಲಾಗಿದೆ ವಿನಃ ಇಲ್ಲಿನ ಜನನಾಯಕರು ಮಾತ್ರ ಅಂತರ ಕಾಪಾಡಿಕೊಂಡಿದ್ದಾರೆ. ಅಲ್ಲದೇ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಬೆಂಬಲಿಗ ಬಿಜೆಪಿ ಕಾರ್ಯಕರ್ತರು ,ಮುಖಂಡರು ಮಾತ್ರ ದೂರ ದೂರ ಉಳಿದಿದ್ದಾರೆ.
ಶೆಟ್ಟರ್ ಹೇಳಿಕೆ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಸಿಎಂ ಬೊಮ್ಮಾಯಿ ಏಕಾಂಗಿಯಾಗಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಇನ್ನೂ ಅಧಿಕಾರ ಸ್ವೀಕಾರದ ಬಳಿಕ ತವರು ನೆಲದಲ್ಲೆ ಸ್ವಪಕ್ಷಿಯರ ಅಸಮಾಧಾನ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಬೊಮ್ಮಾಯಿಗೆ ಕಂಟಕವಾಗುತ್ತಾ ಜಗದೀಶ್ ಬಣ ಎಂಬುವುದನ್ನು ಕಾದು ನೋಡಬೇಕಿದೆ.
PublicNext
29/07/2021 03:41 pm