ಬೆಂಗಳೂರು: ಬೆಂಗಳೂರು ಗ್ರಾಮಾಂತರ ಪೊಲೀಸರಿಗೆ ತಲೆ ನೋವಾಗಿದ್ದ ಐನಾತಿ ಕಳ್ಳರು ಕೊನೆಗೂ ಅರೆಸ್ಟ್ ಆಗಿದ್ದಾರೆ. ಸಿನಿಮೀಯ ರೀತಿಯಲ್ಲಿ ಅಪರಾಧ ಕೃತ್ಯ ನಡೆಸುತ್ತಿದ್ದ ಸದ್ಯ ಬಂಧಿತ ಆರೋಪಿಗಳನ್ನ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಅರ್ಜುನ್ ಕುಮಾರ್, ರಾಥೋಡ್ ಬಂಧಿತ ಆರೋಪಿಗಳು. ಮೂರು ವರ್ಷಕ್ಕೊಮ್ಮೆ ಒಂದೊಂದು ರಾಜಧಾನಿಗೆ ಎಂಟ್ರಿ ಕೊಟ್ಟು ಈ ಗ್ಯಾಂಗ್ ಸರಗಳ್ಳತನ ಮಾಡುತ್ತದೆ. ಫ್ಲೈಟ್ ನಲ್ಲಿ ಬಂದು ಕಳ್ಳತನ ಮಾಡಿ ಮರಳಿ ರೈಲಿನಲ್ಲಿ ಈ ಗ್ಯಾಂಗ್ ತೆರಳುತ್ತಿತ್ತು. ಈ ಮೂಲಕ ಫುಲ್ ಐಷಾರಾಮಿ ಜೀವನ ನಡೆಸುತ್ತಿದ್ದರು. ಬ್ಲ್ಯಾಕ್ ಪಲ್ಸರ್ ನಲ್ಲಿ ಬಂದಿದ್ದ ಖದೀಮರನ್ನು ಕಡೆಗೂ ಬಂಧಿಸಲಾಗಿದೆ.
ಜೂನ್ 30 ರಂದು ಸಿಎಂ ಕಾರ್ಯಕ್ರಮದ ಬಂದೋಬಸ್ತ್ನಲ್ಲಿ ಪೊಲೀಸರು ಬ್ಯುಸಿ ಆಗಿದ್ದರು. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದ ಈ ಶಾಮ್ಲಿ ಗ್ಯಾಂಗ್, ನಗರದ ಹೊರಹೊಲಯದಲ್ಲಿ ಒಂದೇ ದಿನ 19 ಕಡೆ ಸರಗಳ್ಳತನ ಮಾಡಿತ್ತು. ಬ್ಲಾಕ್ ಫಲ್ಸರ್ ಬೈಕ್ ಗಳಲ್ಲಿ ಬಂದಿದ್ದ ಖದೀಮರ ತಂಡ ಕೃತ್ಯ ನಡೆಸಿ ಎಸ್ಕೇಪ್ ಆಗಿತ್ತು. ಇದರ ಜಾಡು ಹಿಡಿದು ಹೊರಟಿದ್ದ ಪೊಲೀಸರು ಉತ್ತರ ಪ್ರದೇಶದಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ.
PublicNext
28/07/2021 04:46 pm