ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತ- ಪಾಕ್ ಒಳ್ಳೆಯ ಸ್ನೇಹ ನೋಡುವುದೇ ನನ್ನ ಕನಸು: ಮಲಾಲಾ

ನವದೆಹಲಿ: ಭಾರತ ಹಾಗೂ ಪಾಕಿಸ್ತಾನಗಳು ಒಳ್ಳೆಯ ಸ್ನೇಹಿತರಂತೆ ಇರುವುದನ್ನು ನೋಡುವುದೇ ನನ್ನ ಕನಸು ಎಂದು ನೋಬೆಲ್‌ ಪುರಸ್ಕೃತೆ, ಪಾಕಿಸ್ತಾನದನ ಶಾಂತಿ ಹೋರಾಟಗಾರ್ತಿ ಮಲಾಲಾ ಯೂಸಫಾಯಿ ಹೇಳಿದ್ದಾರೆ.

ಜೈಪುರ ಸಾಹಿತ್ಯೋತ್ಸವದ ವರ್ಚುವಲ್‌ ಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿ ಹೊಂದಿರುವುದು ಮತ್ತು ಎರಡೂ ದೇಶಗಳನ್ನು ವಿಭಜನೆಯ ದೃಷ್ಟಿಯಿಂದ ನೋಡುವುದು ಹಳಸಲು ಕಲ್ಪನೆಯಾಗಿದೆ. ಎರಡೂ ದೇಶಗಳ ಜನತೆ ಶಾಂತಿಯಿಂದ ಜತೆಜತೆಗೆ ಬದುಕಲು ಇಚ್ಛಿಸುತ್ತಾರೆ. ಪರಸ್ಪರ ನೈಜ ಸ್ನೇಹಿತರಂತೆ ಎರಡೂ ದೇಶಗಳನ್ನು ನೋಡುವುದು ನನ್ನ ಕನಸು ಎಂದು ತಿಳಿಸಿದ್ದಾರೆ.

ನೀವು ಇಂಡಿಯನ್‌ ಆಗಿ, ನಾವು ಪಾಕಿಸ್ತಾನಿಗಳಾಗಿ ತುಂಬಾ ಚೆನ್ನಾಗಿದ್ದೇವೆ. ಆದಾಗ್ಯೂ ನಮ್ಮ ನಡುವೆ ದ್ವೇಷ ಬಿತ್ತುತ್ತಿರುವುದು ಯಾರು ಮತ್ತು ಏಕೆ? ಭಾರತ- ಪಾಕ್‌ ಗೆಳೆಯರಾದಾಗ ಮಾತ್ರವೇ ನಾವು ಪರಸ್ಪರ ಉಭಯ ರಾಷ್ಟ್ರಗಳಿಗೆ ಭೇಟಿ ನೀಡಲು ಸಾಧ್ಯ. ನೀವು ಪಾಕಿಸ್ತಾನಿ ನಾಟಕವನ್ನೂ, ನಾವು ಬಾಲಿವುಡ್‌ ಸಿನಿಮಾಗಳನ್ನೂ ನೋಡಬಹುದು. ಒಟ್ಟಿಗೆ ಕ್ರಿಕೆಟ್‌ ಪಂದ್ಯಗಳನ್ನು ವೀಕ್ಷಿಸಬಹುದು ಎಂದರು.

Edited By : Vijay Kumar
PublicNext

PublicNext

01/03/2021 07:46 am

Cinque Terre

68.49 K

Cinque Terre

9

ಸಂಬಂಧಿತ ಸುದ್ದಿ