ಬೆಂಗಳೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಿಂದಲೇ ಕೊನೆಯ ಹಂತದ ಕಸರತ್ತು ನಡೆಸಿದರು. ಈಗಿದ್ದರೂ ಕಾಂಗ್ರೆಸ್ ಕೈಯಿಂದ ಮೇಯರ್ ಸ್ಥಾನ ತಪ್ಪಿದ್ದು, ಉಪ ಮೇಯರ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ವಿಧಾನಸೌಧದ ಕಾರ್ಯಕ್ರಮದ ನಡುವೆ ಎರಡು ಸಲ ಎದ್ದು ಹೋಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನ ಸ್ಥಳೀಯ ನಾಯಕರೊಂದಿಗೆ ಫೋನ್‌ನಲ್ಲಿ ನಿರಂತರ ಸಂಪರ್ಕದಲ್ಲಿದ್ದರು. ಬ್ಯಾಂಕ್ವೆಟ್ ಹಾಲ್ ಹೊರಗೆ ಬಂದು ಮಾಜಿ ಸಿಎಂ ಸಿದ್ದರಾಮಯ್ಯ ಫೋನ್ ಮೂಲಕ ಮೇಯರ್ ಪಟ್ಟಕ್ಕಾಗಿ ಕೊನೆ ಹಂತದ ಕಸರತ್ತು ನಡೆಸಿದ್ದರು.
ಸಿದ್ದರಾಮಯ್ಯ ಅವರ ಸಂಪರ್ಕಕ್ಕೆ ಶಾಸಕ ತನ್ವೀರ್ ಸೇಠ್ ಸಿಗದ ಹಿನ್ನೆಲೆ ಮಾಜಿ ಸಂಸದ ಧ್ರುವನಾರಾಯಣ ಸೇರಿ ಒಂದಿಬ್ಬರು ನಾಯಕರ ಜತೆ ಮಾತುಕತೆ ನಡೆಸಿದ್ದರು. ನೆಟ್‌ವರ್ಕ್ ಸಮಸ್ಯೆಯಿಂದ ಮತ್ತೆ ಮತ್ತೆ ಕಾಲ್ ಕಟ್ ಆಗುತ್ತಿದ್ದರೂ, ಕಾಲ್ ಮಾಡಿ ಮಾತನಾಡಲು ಸಿದ್ದರಾಮಯ್ಯ ಪ್ರಯತ್ನಿಸಿದ್ದರು.
PublicNext
24/02/2021 05:54 pm