ರಾಮನಗರ: ಬಹುಕೋಟಿ ಐಎಂಎ ಹಗರಣಕ್ಕೂ ನನಗೂ ಏನೂ ಸಂಬಂಧವಿಲ್ಲ. ನನ್ನ ಅವಧಿಯಲ್ಲೇ ತನಿಖೆಗೆ ಆದೇಶಿಸಿ, ಕಠಿಣ ಕ್ರಮ ತೆಗೆದುಕೊಳ್ಳಲು ಹೇಳಿದ ಮೇಲೆ ನನ್ನ ಪಾತ್ರವೇನಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿ ಸ್ಪಷ್ಟನೆ ನೀಡಿದ್ದಾರೆ.
ಐಎಂಎ ಮಾಲೀಕ ಮನ್ಸೂರ್ ಅಲಿಖಾನ್ ಕೊಟ್ಟಿರುವ ಹೇಳಿಕೆಯೊಂದರಲ್ಲಿ ಮಾಜಿ ಸಚಿವ ರೋಷನ್ ಬೇಗ್ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಐದು ಕೋಟಿ ರೂ. ಸಲ್ಲಿಕೆಯಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಮಾಧ್ಯಮಗಳ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಅವರು, ನನಗೂ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
ಕುಮಾರಸ್ವಾಮಿ ಹೆಸರಿನಲ್ಲಿ ಕಲೆಕ್ಷನ್ ಆಗಿದೆ. ಆದರೆ ಆ ಹಣ ಅವರಿಗೆ ತಲುಪಿಲ್ಲ ಎಂಬ ಸುದ್ದಿಯನ್ನು ಮಾಧ್ಯಮವೊಂದರಲ್ಲಿ ಸುದ್ದಿ ನೋಡಿದೆ. ನನಗೂ, ಅದಕ್ಕೂ ಸಂಬಂಧ ಏನು? ಅದ್ಯಾರು ಕೊಟ್ಟರು, ಅದ್ಯಾರು ತೆಗೆದುಕೊಂಡರು? ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ನಾನು ಜನಸಾಮಾನ್ಯರಿಗೆ ದ್ರೋಹ ಮಾಡುವ ಅಥವಾ ಜನರ ಹಣ ಲೂಟಿ ಮಾಡುವವರಿಗೆ ರಕ್ಷಣೆ ಕೊಟ್ಟವನಲ್ಲ ಎಂದು ಹೇಳಿದರು.
PublicNext
21/02/2021 10:18 pm