ಬೆಳಗಾವಿ: ಸಂಪುಟ ಸಭೆಯಲ್ಲಿ ಪಂಚಮಸಾಲಿ ಮೀಸಲಾತಿಗೆ ವಿರೋಧಿಸಿದ್ದೇನೆ ಎಂಬುದು ಸುಳ್ಳು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಉಪವಾಸ ಸತ್ಯಾಗ್ರಹ ಮಾಡಿದ್ದಾಗ ನಾನೇ ಹೋಗಿ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದೆ. ಮುಖ್ಯಮಂತ್ರಿಗಳ ಗಮನಕ್ಕೆ ತರುವೆ ಎಂದು ನಾನೇ ಹೋಗಿ ಶ್ರೀಗಳಿಗೆ ಬೆಂಬಲ ಕೊಟ್ಟಿದ್ದೆ. ಸಂಪುಟ ಸಭೆಯಲ್ಲಿ ಮೀಸಲಾತಿ ಪರ ವಿರೋಧ ಯಾವುದು ಆಗಿಲ್ಲ. ಸಚಿವ ಸಿಸಿ ಪಾಟೀಲ್, ಮುರುಗೇಶ್ ನಿರಾಣಿ ಸಂಪುಟದಲ್ಲಿ ವಿಷಯ ಪ್ರಸ್ತಾಪಿಸಿದ್ದರು ಎಂದು ತಿಳಿಸಿದರು.
ಪಂಚಮಸಾಲಿ ಶ್ರೀಗಳು ಪಾದಯಾತ್ರೆ ಮಾಡುತ್ತಿರುವಾಗಿ ಮಾತನಾಡಿದ ಅವರು, ಇದು ಸೂಕ್ಷ್ಮವಾದ ವಿಷಯ. ಸೂಕ್ಷ್ಮವಾಗಿ ಪರಿಗಣಿಸುವುದಾಗಿ ಸಿಎಂ ಹೇಳಿದ್ದಾರೆ. ಪಂಚಮಸಾಲಿ ಸಮಾವೇಶಕ್ಕೆ ಇಬ್ಬರೂ ಸಚಿವರು ಹೋಗಬೇಕು. ಡಿಸಿಎಂ ಅಶ್ವತ್ಥ್ ನಾರಾಯಣ್ ಹೋಗಿ ಮನವಿ ತಗೆದುಕೊಂಡು ಬರಬೇಕೆಂದು ಮಾತ್ರ ಚರ್ಚೆಯಾಗಿದೆ. ಡಿಸಿಎಂ ಅಶ್ವತ್ಥ್ ನಾರಾಯಣ್, ಸಚಿವರಾದ ಸಿ.ಸಿ.ಪಾಟೀಲ್, ನಿರಾಣಿ ಸಮಾವೇಶಕ್ಕೆ ಹೋಗಬೇಕೆಂದು ತೀರ್ಮಾನವಾಗಿದೆ ಎಂದರು.
ಸಮಾಜಕ್ಕೆ ತಪ್ಪು ಸಂದೇಶ ನೀಡಲು ಕಾಣದ ಕೈಗಳು ಅಪಪ್ರಚಾರ ಮಾಡುತ್ತಿವೆ. ರಾಜಕೀಯವಾಗಿ ಕೆಲವರು ಊಹಾಪೋಹ ಎಬ್ಬಿಸುವುದು ಸಹಜ. ನಿನ್ನೆ ಜಯಮೃತ್ಯುಂಜಯ ಸ್ವಾಮೀಜಿಗೆ ಕರೆ ಮಾಡಿ ಮಾತನಾಡಿ, ನಿಮಗೆ ಯಾರೋ ತಪ್ಪು ಕಲ್ಪನೆ ನೀಡಿದ್ದಾರೆ ಎಂದು ಹೇಳಿದ್ದೇನೆ. ಕೆಲವೊಬ್ಬರಿಗೆ ಕೆಲವೊಬ್ಬರ ಬೆಳವಣಿಗೆ ಸಹಿಸಲು ಆಗಲ್ಲ. ರಾಜಕಾರಣದಲ್ಲಿ ಇದ್ದೇವೆ ಎಂದಾಗ ಎಲ್ಲ ಸಹಜವಾಗಿ ತಗೆದುಕೊಳ್ಳಬೇಕಾಗುತ್ತೆ. ಟೀಕೆ, ಟಿಪ್ಪಣೆ ಇರುತ್ತೆ, ಬೆಂಬಲಿಸುವುದು ಹೊಗಲೂವುದು ತೆಗಲುವುದು ಇರುತ್ತೆ ಎಂದು ಹೇಳಿದರು.
PublicNext
20/02/2021 09:29 pm