ಮೈಸೂರು: ದೇವರು ಅಂದ್ರೆ ಜನರಿಗೆ ಭಯ, ಭಕ್ತಿ ನಾನು ನನ್ನ ಹುಟ್ಟೂರಿನಲ್ಲಿ ರಾಮಮಂದಿರ ಕಟ್ಟಿಸುತ್ತಿದ್ದೇನೆ. ಈ ರಾಮ ಮಂದಿರದ ನಿರ್ಮಾಣಕ್ಕೆ ಜನರು ಹಣ ನೀಡುತ್ತಿದ್ದಾರೆ. ಎಷ್ಟು ವೆಚ್ಚ ಎನ್ನುವುದರ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶ್ರೀರಾಮ ಜನರ ಧಾರ್ಮಿಕ ನಂಬಿಕೆ ಎಂದಿರುವ ಸಿದ್ದರಾಮಯ್ಯ ಅವರು ಎಲ್ಲಾ ಕಡೆ ರಾಮ ಮಂದಿರವನ್ನು ಕಟ್ಟುತ್ತಾರೆ. ಅದರಲ್ಲೇನಿದೆ? ದೇವರು ಅನ್ನೋದು ಜನರಿಗೆ ಭಯ, ಭಕ್ತಿಯ ಸಂಕೇತ. ಇದನ್ನು ಅವರು ರಾಜಕಾರಣಕ್ಕಾಗಿ ಬಳಸುತ್ತಾರೆ ಎಂದಿದ್ದಾರೆ.
PublicNext
20/02/2021 11:35 am